alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಾಯನ್ಸ್ ಜಿಯೋ ಗ್ರಾಹಕರಿಗೊಂದು ಖುಷಿ ಸುದ್ದಿ

ರಿಲಾಯನ್ಸ್ ಜಿಯೋ ಫೋನ್ ಗ್ರಾಹಕರಿಗೊಂದು ಖುಷಿ ಸುದ್ದಿ. ರಿಲಾಯನ್ಸ್ ಜಿಯೋ ಫೋನ್ ನಲ್ಲಿ ಶೀಘ್ರದಲ್ಲಿಯೇ ಫೇಸ್ಬುಕ್ ನಡೆಯಲಿದೆ. ಅನೇಕ ದಿನಗಳ ಹಿಂದೆಯೇ ಫೇಸ್ಬುಕ್ ಜೊತೆ ಜಿಯೋ ಮಾತುಕತೆ ನಡೆಸಿತ್ತು. ರಿಲಾಯನ್ಸ್ ಜಿಯೋದಲ್ಲಿ KaiOS ನೀಡಲಾಗಿದೆ. ಆದ್ರೆ ಈ ಒಎಸ್ ನಲ್ಲಿ ಫೇಸ್ಬುಕ್ ಆ್ಯಪ್ ಇರಲಿಲ್ಲ.

ವರದಿ ಪ್ರಕಾರ, ಫೇಸ್ಬುಕ್ KaiOS ಗಾಗಿ ಆ್ಯಪ್ ತಯಾರಿಸಿದೆ. ಆದಷ್ಟು ಬೇಗ ಜಿಯೋ ಫೋನ್ ಗೂ ಫೇಸ್ಬುಕ್ ಸಿಗಲಿದೆ. ವಿಶ್ವದಾದ್ಯಂತ KaiOSಗೆ ಒಂದು ಕೋಟಿ ಬಳಕೆದಾರರಿದ್ದಾರೆ. ಜಿಯೋ ಫೋನ್ ಗೂ KaiOS ನೀಡಲಾಗಿದೆ. KaiOSನಲ್ಲಿ ಫೇಸ್ಬುಕ್ ಆ್ಯಪ್ ಯಾವಾಗ ಸಿಗಲಿದೆ ಹಾಗೂ ಜಿಯೋ ಫೋನ್ ನಲ್ಲಿ ಎಂದಿನಿಂದ ಫೇಸ್ಬುಕ್ ಆ್ಯಪ್ ಲಭ್ಯವಾಗಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ವರದಿ ಪ್ರಕಾರ ಜಿಯೋ ವಾಟ್ಸಾಪ್ ಅಪ್ಲಿಕೇಷನ್ ನೀಡುವ ಬಗ್ಗೆಯೂ ಮಾತುಕತೆ ನಡೆಸಿದೆ ಎನ್ನಲಾಗಿದೆ. ಫೇಸ್ಬುಕ್ ಜಿಯೋ ಫೋನ್ ಗೆ ಬಂದ್ರೆ ಶೀಘ್ರದಲ್ಲಿಯೇ ವಾಟ್ಸಾಪ್ ಕೂಡ ಗ್ರಾಹಕರಿಗೆ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...