alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸ್ ಅಪ್ ಜೊತೆ ಸೇರಿ ಫೇಸ್ಬುಕ್ ತರ್ತಿದೆ ಹೊಸ ಫೀಚರ್

ನೀವು ಫೇಸ್ಬುಕ್ ಜಾಹೀರಾತುದಾರರಾಗಿದ್ದರೆ ನಿಮಗೊಂದು ಖುಷಿ ಸುದ್ದಿ. ಫೇಸ್ಬುಕ್ ತನ್ನ ಎರಡನೇ ಪ್ಲಾಟ್ಫಾರ್ಮ್ ವಾಟ್ಸ್ ಅಪ್ ನಲ್ಲಿ ಹೊಸ ಫೀಚರ್ ಶುರು ಮಾಡ್ತಿದೆ. ಕ್ಲಿಕ್ ಟು ವಾಟ್ಸ್ ಅಪ್ ಬಟನ್ ಫೀಚರನ್ನು ಫೇಸ್ಬುಕ್ ಬಿಡುಗಡೆ ಮಾಡಿದೆ. ಈ ಫೀಚರ್ ಮೂಲಕ ಜಾಹೀರಾತುದಾರರು ವಾಟ್ಸ್ ಅಪ್ ನ ಸುಮಾರು ಒಂದು ಬಿಲಿಯನ್ ಜನರನ್ನು ಸಂಪರ್ಕಿಸಬಹುದಾಗಿದೆ.

ಮೂಲಗಳ ಪ್ರಕಾರ, ಫೇಸ್ಬುಕ್ ಎರಡು ಬಿಲಿಯನ್ ಬಳಕೆದಾರರನ್ನು ಹೊಂದಿದೆ. ಈ ಫೀಚರನ್ನು ಕ್ರಮೇಣ ಎಲ್ಲೆಡೆ ವಿಸ್ತರಿಸಲಿದೆ. ಆರಂಭದಲ್ಲಿ ಉತ್ತರ ದಕ್ಷಿಣ ಅಮೆರಿಕಾ, ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಏಷ್ಯಾ ಮೊದಲಾದ ದೇಶಗಳಲ್ಲಿ ಇದನ್ನು ಆರಂಭಿಸಲಿದೆ.

ಜಾಹೀರಾತುದಾರರಿಗೆ ಜನರನ್ನು ತಲುಪಲು ಇದು ಸುಲಭ ಹಾಗೂ ಸರಳ ಮಾರ್ಗವಾಗಿದೆ ಎಂದು ಫೇಸ್ಬುಕ್ ಮಾರ್ಕೆಟಿಂಗ್ ಮ್ಯಾನೇಜರ್ ಹೇಳಿದ್ದಾರೆ. ಫೇಸ್ಬುಕ್ ಜಾಹೀರಾತಿಗೆ ಕ್ಲಿಕ್ ಟು ವಾಟ್ಸ್ ಅಪ್ ಬಟನ್ ಜೋಡಣೆ ಮಾಡುವುದ್ರಿಂದ ವ್ಯಾಪಾರಸ್ಥರ ಕೆಲಸ ಸುಲಭವಾಗಲಿದೆ ಎಂದವರು ಹೇಳಿದ್ದಾರೆ. ಈ ಹೊಸ ಫೀಚರ್ ನಲ್ಲಿ ವಿಂಕ್ ಹಾಗೂ ಹೈ-ಫೈವ್ ನಂತ ಆಯ್ಕೆಗಳಿರಲಿದೆ. ಬ್ರಿಟನ್, ಥೈಲ್ಯಾಂಡ್, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ನಲ್ಲಿ ಪರೀಕ್ಷೆ ನಡೆಯುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...