alex Certify
ಕನ್ನಡ ದುನಿಯಾ       Mobile App
       

Kannada Duniya

ಸೆ.15 ರಿಂದ ಕಡ್ಡಾಯವಾಗಲಿದೆ ಆಧಾರ್ ಮುಖ ದೃಢೀಕರಣ

ವಿಶಿಷ್ಟ ಗುರುತಿನ  ಸಂಖ್ಯೆ ಪ್ರಾಧಿಕಾರ (ಯುಐಡಿಎಐ) ಆಧಾರ್ ಭದ್ರತೆ ಹೆಚ್ಚಿಸುವ ದೃಷ್ಟಿಯಿಂದ ಹೊಸ ಹೆಜ್ಜೆಯಿಟ್ಟಿದೆ. ಯಾವುದೇ ಕೆಲಸಕ್ಕೆ ಆಧಾರ್ ಬಳಸುವ ಮೊದಲು ಮುಖ ದೃಢೀಕರಣ ಅತ್ಯಗತ್ಯವೆಂದು ಯುಐಡಿಎಐ ಹೇಳಿದೆ.

ಹೊಸ ಸಿಮ್, ಬ್ಯಾಂಕ್ ಖಾತೆ ಸೇರಿದಂತೆ ಯಾವುದೇ ಕೆಲಸಕ್ಕೆ ದಾಖಲೆ ರೂಪದಲ್ಲಿ ಆಧಾರ್ ಕಾರ್ಡ್ ನೀಡುವ ಜೊತೆಗೆ ಹೊಸ ಯೋಜನೆ ಕೂಡ ಜಾರಿಗೆ ಬರಲಿದೆ. ಬೆರಳಚ್ಚು, ಕಣ್ಣಿನ ಗುರುತಿನ ಜೊತೆ ಮುಖ ದೃಢೀಕರಣ ಹೆಚ್ಚುವರಿ ಫೀಚರ್.

ಆಧಾರ್ ಸುರಕ್ಷತೆಗಾಗಿ ಈ ಫೀಚರ್ ಜಾರಿಗೆ ತಂದಿರುವುದಾಗಿ ಯುಐಡಿಎಐ ಹೇಳಿದೆ. ವೃದ್ಧರ ಬೆರಳಚ್ಚು ಸಮಸ್ಯೆಗೂ ಇದು ಪರಿಹಾರವಾಗಲಿದೆ. ಯುಐಡಿಎಐ ವರದಿ ಪ್ರಕಾರ, ಸೆಪ್ಟೆಂಬರ್ 15ರಿಂದ ಟೆಲಿಕಾಂ ಕಂಪನಿಗಳಿಗೆ ಇದು ಅನಿವಾರ್ಯವಾಗಲಿದೆ.

ಇಷ್ಟು ದಿನ ಈ ಯೋಜನೆಯನ್ನು ಮುಂದೂಡುತ್ತಾ ಬಂದಿದ್ದ ಯುಐಡಿಎಐ, ಸೆಪ್ಟೆಂಬರ್ 15ರಿಂದ ಹಂತ ಹಂತವಾಗಿ ಜಾರಿಗೆ ತರಲು ನಿರ್ಧರಿಸಿದೆ. ಹೊಸ ಸಿಮ್ ನೀಡುವ ವೇಳೆ ಬೆರಳಚ್ಚಿನ ಜೊತೆ ಮುಖದ ದೃಢೀಕರಣ ಪಡೆಯಬೇಕಾಗುತ್ತದೆ. ಇದನ್ನು ಉಲ್ಲಂಘನೆ ಮಾಡಿದ್ರೆ ದಂಡ ವಿಧಿಸಲಾಗುವುದು ಎಂದು ಯುಐಡಿಎಐ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...