alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ದೃಢೀಕರಣಕ್ಕೆ ಮುಖ ಚಹರೆ ಬಳಕೆ

ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆಧಾರ್‌ ದೃಢೀಕರಣ ಪ್ರಕ್ರಿಯೆಯಲ್ಲಿ ಬೆರಳಚ್ಚು ಮತ್ತು ಕಣ್ಣಿನ ಪಾಪೆಯ ಸ್ಕ್ಯಾನಿಂಗ್‌ನಲ್ಲಿ ಸಮಸ್ಯೆ ಹೊಂದಿರುವವರಿಗೆ  ಮುಖಚಹರೆ ದೃಢೀಕರಣ ವ್ಯವಸ್ಥೆಯನ್ನು ಪರಿಚಯಿಸಲು ನಿರ್ಧರಿಸಿದೆ.

ಈ ನೂತನ  ಸೌಲಭ್ಯ ಜುಲೈ 1ರ ನಂತರ ಲಭ್ಯವಾಗಲಿದೆ. ನೋಂದಾಯಿತ ಸಾಧನಗಳ ಮೂಲಕ ದೃಢೀಕರಣ ಪ್ರಕ್ರಿಯೆ ಮಾಡಲು ಅವಕಾಶ ನೀಡಲಾಗುತ್ತದೆ. ಬೆರಳಚ್ಚು, ಐರಿಸ್‌ (ಕಣ್ಣಿನ ಪಾಪೆ), ಒಟಿಪಿ ಜೊತೆಗೆ ಮುಖಚರ್ಯೆಯನ್ನೂ ದೃಢೀಕರಣಕ್ಕಾಗಿ ಬಳಸಿಕೊಳ್ಳಬಹುದು.

ಕೆಲವರಲ್ಲಿ ಬೆರಳಚ್ಚು ಅಳಿಸಿ ಹೋಗಿರುತ್ತದೆ. ವೃದ್ಧರು ಹಾಗೂ ವಿಕಲ ಚೇತನರಲ್ಲಿ ಈ ಸಮಸ್ಯೆ ಇರುತ್ತದೆ. ಅಂಥವರು ಬಯೋಮೆಟ್ರಿಕ್‌ ವಿಧಾನದ ಮೂಲಕ ದೃಢೀಕರಣ ಮಾಡುವುದು ಅಸಾಧ್ಯ. ಅವರಿಗೆ ಫೇಸ್ ಐಡೆಂಟಿಫಿಕೇಶನ್ ಲಭ್ಯವಾಗಲಿದೆ. ಆಧಾರ್ ಡೇಟಾ ಭದ್ರತೆ ಕುರಿತು ಸಂದೇಹಗಳು ವ್ಯಕ್ತವಾಗಿದ್ದರಿಂದ ಹೊಸ ಹೊಸ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...