alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಲ ಪಡೆದವರಿಗೆ ಶಾಕಿಂಗ್ ನ್ಯೂಸ್…!

ಮುಂಬೈ: ಖಾಸಗಿ ಬ್ಯಾಂಕ್ ಗಳ ಮೂಲ ಬಡ್ಡಿ ದರವನ್ನು(MCLR) ಏರಿಕೆ ಮಾಡಿರುವುದರಿಂದ ಮುಂದಿನ ದಿನಗಳಲ್ಲಿ ಸಾಲದ ಬಡ್ಡಿ ದರದಲ್ಲಿ ಏರಿಕೆಯಾಗಲಿದೆ.

ಎಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಮೊದಲಾದ ಖಾಸಗಿ ಬ್ಯಾಂಕ್ ಗಳು ತಮ್ಮ ಮೂಲ ಬಡ್ಡಿ ದರವನ್ನು ಹೆಚ್ಚಿಸಿವೆ. ಇದರಿಂದ ಗ್ರಾಹಕರ ಕಾರು ಸಾಲ, ಮನೆ ಸಾಲದ ಬಡ್ಡಿ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ.

ಜನವರಿಯಿಂದ ಅನ್ವಯವಾಗುವಂತೆ ಮೂಲ ಬಡ್ಡಿ ದರವನ್ನು ಖಾಸಗಿ ವಲಯದ ಬ್ಯಾಂಕ್ ಗಳು ಏರಿಕೆ ಮಾಡಿವೆ. ಠೇವಣಿಗಳಿಗೆ ಹೆಚ್ಚಿನ ಬಡ್ಡಿ ನೀಡುತ್ತಿದ್ದು, ಈ ಕಾರಣದಿಂದ ಮೂಲ ಬಡ್ಡಿ ದರದಲ್ಲಿ ಅಲ್ಪ ಪ್ರಮಾಣದ ಏರಿಕೆ ಮಾಡಲಾಗಿದೆ. 2016 ಏಪ್ರಿಲ್ ನಿಂದ ನೂತನ ಮೂಲ ಬಡ್ಡಿ ದರದ ನೀತಿಯನ್ನು ಜಾರಿಗೆ ತರಲಾಗಿದ್ದು, ಎಲ್ಲಾ ರೀತಿಯ ಸಾಲಗಳಿಗೆ ಬಡ್ಡಿ ದರವನ್ನು ನಿಗದಿ ಮಾಡುವಲ್ಲಿ ಇದು ಅನ್ವಯವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...