alex Certify
ಕನ್ನಡ ದುನಿಯಾ       Mobile App
       

Kannada Duniya

ವಸ್ತುಗಳನ್ನು ಉದ್ರಿಗೂ ನೀಡ್ತಿದೆ ಫ್ಲಿಪ್ಕಾರ್ಟ್ : ಶುರುವಾಗಿದೆ ಪೇ ಲೇಟರ್ ಯೋಜನೆ

ಸಣ್ಣ ಸಣ್ಣ ಅಂಗಡಿಗಳಲ್ಲಿ ಉದ್ರಿ ನೀಡಲಾಗುವುದಿಲ್ಲ ಎನ್ನುವ ಬೋರ್ಡ್ ಗಳು ಕಾಣಿಸುತ್ತಿರುತ್ತವೆ. ಹಾಗೆ ಕೆಲ ಅಂಗಡಿಗಳು ವಸ್ತುಗಳನ್ನು ಉದ್ರಿಗೆ ನೀಡುತ್ತವೆ. ಗ್ರಾಹಕರ ಹೆಸರನ್ನು ಪಟ್ಟಿಯಲ್ಲಿ ಬರೆದಿಟ್ಟು ವಸ್ತುಗಳನ್ನು ಕೊಡುತ್ತದೆ. ನಂತ್ರ ನಿಗದಿತ ಸಮಯದೊಳಗೆ ಗ್ರಾಹಕ ಹಣ ನೀಡಿದ್ರೆ ಸಾಕು. ಈ ಉದ್ರಿ ಪದ್ಧತಿ ಈಗ ಇ-ವೆಬ್ಸೈಟ್ ಗಳಿಗೂ ಕಾಲಿಟ್ಟಿದೆ.

ಆಶ್ಚರ್ಯವಾದ್ರೂ ಇದು ಸತ್ಯ. ಇ-ಕಾಮರ್ಸ್ ಕಂಪನಿ ಫ್ಲಿಪ್ಕಾರ್ಟ್ ಉದ್ರಿ ಯೋಜನೆ ಶುರು ಮಾಡಿದೆ. ಪೇ ಲೇಟರ್ ಹೆಸರಿನಲ್ಲಿ ಫ್ಲಿಪ್ಕಾರ್ಟ್ ವಸ್ತುಗಳನ್ನು ಎರವಲು ನೀಡ್ತಿದೆ. ಈ ಪ್ಲಾನ್ ನಲ್ಲಿ ಗ್ರಾಹಕ ವಸ್ತುಗಳನ್ನು ಖರೀದಿ ಮಾಡಿ ಬಳಸಿದ ನಂತ್ರ ಹಣ ನೀಡಬಹುದು.

ನಂಬಿಕಸ್ತ ಹಾಗೂ ಖಾಯಂ ಗ್ರಾಹಕರಿಗೆ ಮಾತ್ರ ಫ್ಲಿಪ್ಕಾರ್ಟ್ ಈ ಸೇವೆ ನೀಡ್ತಿದೆ. ನೀವು ವಸ್ತುಗಳನ್ನು ಖರೀದಿ ಮಾಡುವ ವೇಳೆ ನಿಮಗೆ ಈ ಆಪ್ಶನ್ ಕಾಣಿಸಲಿದೆ. ಅದ್ರ ಮೇಲೆ ಕ್ಲಿಕ್ ಮಾಡಿ ನಿಮ್ಮ ವಿಳಾಸ ಹಾಕಿ ವಸ್ತುಗಳನ್ನು ಖರೀದಿ ಮಾಡಬಹುದು. ವಸ್ತುಗಳು ಮನೆಗೆ ತಲುಪಿ ಅದನ್ನು ಬಳಸಿದ ಮೇಲೆ ನಿಧಾನವಾಗಿ ಹಣ ನೀಡಬಹುದು. ಜೂನ್ 5 ರಂದು ವಸ್ತುಗಳನ್ನು ಖರೀದಿ ಮಾಡಿದ್ರೆ ಜುಲೈ 10 ರವರೆಗೆ ಹಣ ಪಾವತಿಸಲು ನಿಮಗೆ ಅವಕಾಶವಿರುತ್ತದೆ. ಕಂತಿನ ರೂಪದಲ್ಲಿ ಅಥವಾ ಒಂದೇ ಕಂತಿನಲ್ಲಿ ನೀವು ಹಣ ಪಾವತಿ ಮಾಡಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...