alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಬ್ಯಾಂಕ್ ಗಳ ವಿರುದ್ದ ಪ್ರತಿ ಗಂಟೆಗೆ ದಾಖಲಾಗುತ್ತಿದೆ 11 ದೂರು

ಭಾರತದಲ್ಲಿ ದೊಡ್ಡ ದೊಡ್ಡ ಉದ್ಯಮಿಗಳು ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ವಂಚನೆ ಮಾಡಿ ವಿದೇಶಕ್ಕೆ ಪರಾರಿಯಾಗಿರುವ ಮಧ್ಯೆ, ಬ್ಯಾಂಕ್ ಸೇವೆಗಳ ಕುರಿತು ಆಘಾತಕಾರಿ ಮಾಹಿತಿಯೊಂದು ಬಹಿರಂಗವಾಗಿದೆ.

ಬ್ಯಾಂಕಿಂಗ್ ಸೇವೆಯ ಗುಣಮಟ್ಟ ದಿನೇ ದಿನೇ ಕುಸಿಯುತ್ತಿದ್ದು, ಪ್ರತಿಗಂಟೆಗೆ 11 ಮಂದಿ ತಮ್ಮ ಬ್ಯಾಂಕ್ ಗಳ ಸೇವೆ ಕುರಿತು ಅತೃಪ್ತಿ ವ್ಯಕ್ತಪಡಿಸಿ ಬ್ಯಾಂಕಿಂಗ್ ಒಂಬುಡ್ಸ್ ಮನ್ ಗಳ ಬಳಿ ದೂರು ನೀಡುತ್ತಿದ್ದಾರೆನ್ನಲಾಗಿದೆ.

2010 ರ ಏಪ್ರಿಲ್ ಒಂದರಿಂದ 2017 ರ ಮಾರ್ಚ್ 31 ರವರೆಗೆ 4 ಲಕ್ಷಕ್ಕೂ ಅಧಿಕ ಮಂದಿ ಗ್ರಾಹಕರು ಬ್ಯಾಂಕಿಂಗ್ ಒಂಬುಡ್ಸ್ ಮನ್ ಬಳಿ ದೂರು ದಾಖಲಿಸಿದ್ದಾರೆಂದು ತಿಳಿದು ಬಂದಿದೆ. ಅಚ್ಚರಿಯ ಸಂಗತಿಯೆಂದರೆ 2018 ರ ಮಾರ್ಚ್ 31 ರ ಅಂತ್ಯಕ್ಕೆ ಒಂದು ಲಕ್ಷ ದೂರುಗಳು ಬಂದಿವೆ ಎನ್ನಲಾಗಿದೆ.

ಬ್ಯಾಂಕ್ ಖಾತೆದಾರರು ಮತ್ತು ಸಾಲಗಾರರು, ತಮಗೆ ಬ್ಯಾಂಕುಗಳು ಮೋಸ ಮಾಡುತ್ತಿವೆ ಎಂಬ ಭಾವನೆಯನ್ನು ಹೊಂದಿದ್ದು, 2016-17 ರಲ್ಲಿ ದೂರು ನೀಡುವ ಸಂಖ್ಯೆಯಲ್ಲಿ ಶೇ. 27 ರಷ್ಟು ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...