alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್-ಡೀಸೆಲ್ ದರ ಏರಿಕೆಯಿಂದ ಕಂಗೆಟ್ಟ ಗ್ರಾಹಕರಿಗೆ ನೆಮ್ಮದಿಯ ಸುದ್ದಿ ನೀಡಿದ ನಿತಿನ್ ಗಡ್ಕರಿ

ನವದೆಹಲಿ: ದಿನಂಪ್ರತಿ ಗಗನಮುಖಿಯಾಗುತ್ತಿರುವ ಪೆಟ್ರೋಲ್- ಡೀಸೆಲ್ ದರದಿಂದ ಬೇಸತ್ತು ಹೈರಾಣಾಗಿರುವ ಗ್ರಾಹಕರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಒಂದು ನಿಟ್ಟುಸಿರು ಬಿಡುವಂತ ಸುದ್ದಿ ಹೇಳಿದ್ದು, ಶೀಘ್ರದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್ ಗೆ 55 ರೂ. ಹಾಗೂ ಡೀಸೆಲ್‌ ಗೆ ಪ್ರತಿ ಲೀಟರ್‌ಗೆ 50 ರೂ.ನಲ್ಲಿ ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಕೇಂದ್ರ ಸರಕಾರ ಅತಿ ಶೀಘ್ರದಲ್ಲಿ ದೇಶಾದ್ಯಂತ 5 ಎಥೆನಾಲ್‌ ಉತ್ಪಾದನಾ ಘಟಕಗಳನ್ನು ಆರಂಭಿಸಲು ನಿರ್ಧರಿಸಿದ್ದು, ಇವುಗಳು ಕಾರ್ಯಾರಂಭಗೊಂಡ ಬಳಿಕ ತೈಲ ಬೆಲೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಸಚಿವರು ಹೇಳಿದ್ದಾರೆ.

ನಗರಗಳಲ್ಲಿ ಸಂಗ್ರಹವಾಗುವ ತ್ಯಾಜ್ಯ ಘಟಕಗಳಿಂದ ಹಾಗೂ ಭತ್ತ, ಗೋಧಿಯ ಹುಲ್ಲು, ಕಬ್ಬು ಇನ್ನಿತರ ಕೃಷಿಯಿಂದ ಉತ್ಪತ್ತಿಯಾಗುವ ತ್ಯಾಜ್ಯಗಳನ್ನು ಬಳಸಿ ಇಂಧನ ಉತ್ಪತ್ತಿ ಮಾಡುವುದೇ ಎಥನಾಲ್ ಯೋಜನೆಯಾಗಿದ್ದು, ಆದಿವಾಸಿ, ರೈತರು ಅರಣ್ಯವಾಸಿಗಳ ಸಹಾಯದಿಂದ ಎಥೆನಾಲ್‌, ಮೆಥನಾಲ್‌, ಬಯೋ ಇಂಧನಗಳನ್ನು ಉತ್ಪತ್ತಿಗೆ ಹೆಚ್ಚಿನ ಅವಕಾಶಗಳನ್ನು ನೀಡಿ ಮುಂಬರುವ ದಿನಗಳಲ್ಲಿ ಪೆಟ್ರೋಲ್-ಡೀಸೆಲ್ ಆಮದು ಪ್ರಮಾಣವನ್ನು ಕಡಿಮೆ ಮಾಡುವ ಮೂಲಕ ತೈಲ ದರವನ್ನು ನಿಯಂತ್ರಿಸುವುದು ಸರ್ಕಾರದ ಉದ್ದೇಶವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...