alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ ನೌಕರರಿಗೆ ಬಂಪರ್, ನಾಳೆ ಆಯೋಗದ ವರದಿ ಸಲ್ಲಿಕೆ

ಬೆಂಗಳೂರು: ಚುನಾವಣೆ ವರ್ಷದಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ ಬಂಪರ್ ಕೊಡುಗೆ ನೀಡಲು ಸಿ.ಎಂ. ಸಿದ್ಧರಾಮಯ್ಯ ಮುಂದಾಗಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಕುರಿತಾಗಿ ರಚಿಸಲಾಗಿರುವ 6 ವೇತನ ಆಯೋಗದ ವರದಿಯನ್ನು ನಾಳೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗುತ್ತದೆ. ವೇತನ ಆಯೋಗದ ಅಧ್ಯಕ್ಷ ಶ್ರೀನಿವಾಸ ಮೂರ್ತಿ ಅವರು ಸಲ್ಲಿಸಲಿರುವ ವರದಿಯ ಕುರಿತಾಗಿ ನೌಕರರ ವಲಯದಲ್ಲಿ ಕುತೂಹಲ ಹೆಚ್ಚಾಗಿದೆ.

ಸರ್ಕಾರಿ ನೌಕರರಿಗೆ ಶೇ. 25 ರಿಂದ 30 ರಷ್ಟು ವೇತನ ಹೆಚ್ಚಳಕ್ಕೆ ವರದಿಯಲ್ಲಿ ಶಿಫಾರಸು ಮಾಡುವ ಸಾಧ್ಯತೆ ಇದೆ. ಆಯೋಗದ ವರದಿ ನಾಳೆ ಸಲ್ಲಿಕೆಯಾಗಲಿದ್ದು, ಇದರ ಆಧಾರದ ಮೇಲೆ ಸಿ.ಎಂ. ರಾಜ್ಯ ಸರ್ಕಾರಿ ನೌಕರರ ವೇತನ ಹೆಚ್ಚಳ ಕುರಿತಾಗಿ ಬಜೆಟ್ ನಲ್ಲಿ ಘೋಷಿಸಲಿದ್ದಾರೆ.

ಸರ್ಕಾರಿ ನೌಕರರು ಕೇಂದ್ರ ಸರ್ಕಾರಿ ನೌಕರರ ವೇತನಕ್ಕೆ ಸಮಾನವಾದ ವೇತನ, ಭತ್ಯೆ ನೀಡಬೇಕೆಂದು ವೇತನ ಆಯೋಗ ಮತ್ತು ಮುಖ್ಯಮಂತ್ರಿಯವರಿಗೆ ಹಿಂದೆಯೇ ಮನವಿ ಮಾಡಿದ್ದಾರೆ. ನೌಕರರ ವಲಯದಲ್ಲಿ ಶೇ. 25 ರಿಂದ 30 ರಷ್ಟು ವೇತನ ಏರಿಕೆ ಬಗ್ಗೆ ಅಸಮಾಧಾನವಿದ್ದು, ಅದಕ್ಕಿಂತ ಹೆಚ್ಚು ವೇತನ ಹೆಚ್ಚಳ ಮಾಡಬೇಕೆಂಬ ಒತ್ತಾಯ ಕೇಳಿ ಬಂದಿದೆ.

ಚುನಾವಣೆ ವರ್ಷವಾಗಿರುವುದರಿಂದ ನೌಕರರ ಓಲೈಕೆಗೆ ಮುಂದಾಗಿರುವ ಸಿ.ಎಂ., ಬಜೆಟ್ ನಲ್ಲಿ ಬಂಪರ್ ಕೊಡುಗೆ ನೀಡಲಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...