alex Certify
ಕನ್ನಡ ದುನಿಯಾ       Mobile App
       

Kannada Duniya

ಶುಭ ಸುದ್ದಿ, ದುಪ್ಪಟ್ಟಾಗಲಿದೆ ಉದ್ಯೋಗಿಗಳ ಮಾಸಿಕ ಪಿಂಚಣಿ

ನವದೆಹಲಿ: ಉದ್ಯೋಗಿಗಳ ಪಿಂಚಣಿ ಯೋಜನೆ ಅನ್ವಯ ಮಾಸಿಕ ಪಿಂಚಣಿಯನ್ನು ದುಪ್ಪಟ್ಟುಗೊಳಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದೆ. ಕನಿಷ್ಠ ಪಿಂಚಣಿಯನ್ನು ಏರಿಕೆ ಮಾಡಬೇಕೆಂದು ಸಂಸದೀಯ ಸಮಿತಿಯಿಂದ ಸರ್ಕಾರಕ್ಕೆ ಸೂಚಿಸಲಾಗಿತ್ತು. ಹೀಗೆ ಸೂಚನೆ ನೀಡಿದ ಮರುದಿನವೇ ಕನಿಷ್ಠ ಪಿಂಚಣಿಯನ್ನು ಏರಿಕೆ ಮಾಡಲಾಗಿದೆ.

ಕನಿಷ್ಠ ಪಿಂಚಣಿ ಮೊತ್ತವನ್ನು 1000 ರೂ.ನಿಂದ 2000 ರೂ. ಗೆ ಏರಿಕೆ ಮಾಡಲು ತೀರ್ಮಾನಿಸಿದ್ದು, ಇದರಿಂದ 40 ಲಕ್ಷ ಜನರಿಗೆ ಅನುಕೂಲವಾಗಲಿದೆ. ಸರ್ಕಾರಕ್ಕೆ ವಾರ್ಷಿಕ 3000 ಕೋಟಿ ರೂ. ಹೊರೆಯಾಗಲಿದೆ. ಪ್ರಸ್ತುತ 1000 ರೂ. ಕನಿಷ್ಠ ಪಿಂಚಣಿಯನ್ನು ನೀಡಲಾಗುತ್ತಿದೆ. ಹಣದುಬ್ಬರ ಏರಿಕೆಯಾಗಿರುವುದರಿಂದ ಕನಿಷ್ಠ ಅಗತ್ಯತೆಗಳಿಗೆ ಈ ಹಣ ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಪಿಂಚಣಿ ಏರಿಕೆ ಮಾಡಬೇಕೆಂದು ಸಂಸದೀಯ ಸಮಿತಿ ತಿಳಿಸಿತ್ತು. ಅದರಂತೆ ಕನಿಷ್ಠ ಪಿಂಚಣಿಯನ್ನು ದುಪ್ಪಟ್ಟುಗೊಳಿಸಲು ತೀರ್ಮಾನಿಸಲಾಗಿದೆ.

ಇ.ಪಿ.ಎಫ್.ಒ. ಸಾಮಾಜಿಕ ಭದ್ರತಾ ಯೋಜನೆ ಇ.ಪಿ.ಎಸ್. -95 ರ ಅನ್ವಯ ನಿವೃತ್ತ ಉದ್ಯೋಗಿಗಳಿಗೆ ಪಿಂಚಣಿಯನ್ನು ನೀಡಲಾಗುವುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...