alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರಿ, ಖಾಸಗಿ ಉದ್ಯೋಗಿಗಳಿಗೆ ಇಲ್ಲಿದೆ ಸಿಹಿ ಸುದ್ದಿ

ನವದೆಹಲಿ: ಖಾಸಗಿ ಮತ್ತು ಸರ್ಕಾರಿ ವಲಯದ ಉದ್ಯೋಗಿಗಳಿಗೆ ಅನುಕೂಲವಾಗುವಂತಹ ವಿಧೇಯಕವನ್ನು ಕೇಂದ್ರ ಸರ್ಕಾರ ಸಂಸತ್ ನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಂಡಿದೆ.

ಸಂಘಟಿತ ವಲಯದ ಉದ್ಯೋಗಿಗಳ ತೆರಿಗೆ ಮುಕ್ತವಾದ ಗ್ರಾಚ್ಯುಯಿಟಿ ಮಿತಿಯನ್ನು 20 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಗ್ರಾಚ್ಯುಯಿಟಿ ವಿಧೇಯಕಕ್ಕೆ ಅನುಮೋದನೆ ದೊರೆತಿರುವುದರಿಂದ ಕೇಂದ್ರ ಸರ್ಕಾರದ ಮಹಿಳಾ ಉದ್ಯೋಗಿಗಳ ವೇತನ ಸಹಿತ ಹೆರಿಗೆ ರಜೆಯನ್ನು 26 ವಾರಕ್ಕೆ ವಿಸ್ತರಿಸಲು ದಾರಿ ಸುಗಮವಾದಂತಾಗಿದೆ.

ಕಳೆದ ವಾರ ಲೋಕಸಭೆಯಲ್ಲಿ ಗ್ರಾಚ್ಯುಯಿಟಿ ತಿದ್ದುಪಡಿ ವಿಧೇಯಕ -2017 ಕ್ಕೆ ಅನುಮೋದನೆ ನೀಡಲಾಗಿತ್ತು. ಈಗ ರಾಜ್ಯಸಭೆಯಲ್ಲಿಯೂ ಒಪ್ಪಿಗೆ ದೊರೆತಿದೆ.

ಖಾಸಗಿ ವಲಯದ ನೌಕರರಿಗೆ 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದಲ್ಲಿ 10 ಲಕ್ಷ ರೂ. ವರೆಗೆ ತೆರಿಗೆ ಮುಕ್ತ ಗ್ರಾಚ್ಯುಯಿಟಿ ಪಡೆಯಲು ಅವಕಾಶವಿದ್ದು, ಅದನ್ನು 20 ಲಕ್ಷ ರೂ. ಗೆ ಏರಿಕೆ ಮಾಡಬೇಕೆಂಬ ಬೇಡಿಕೆ ಕೇಳಿ ಬಂದಿತ್ತು.

ಕೇಂದ್ರ ಸರ್ಕಾರಿ ನೌಕರರಿಗೆ 7 ನೇ ವೇತನ ಆಯೋಗದಲ್ಲಿ ತೆರಿಗೆ ಮುಕ್ತ ಗ್ರಾಚ್ಯುಯಿಟಿ ಸೌಲಭ್ಯವನ್ನು 10 ಲಕ್ಷ ರೂ.ನಿಂದ 20 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ. ಈಗ ಖಾಸಗಿ ವಲಯಕ್ಕೂ 20 ಲಕ್ಷ ರೂ.ಗೆ ಏರಿಕೆ ಮಾಡಲಾಗಿದೆ.

ಸಂಸತ್ ನಲ್ಲಿ ಗ್ರಾಚ್ಯುಯಿಟಿ ಪಾವತಿ ತಿದ್ದುಪಡಿ ವಿಧೇಯಕಕ್ಕೆ ಒಪ್ಪಿಗೆ ದೊರೆತಿರುವುದಕ್ಕೆ ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದ್ದು, ಲಕ್ಷಾಂತರ ಭಾರತೀಯ ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...