alex Certify
ಕನ್ನಡ ದುನಿಯಾ       Mobile App
       

Kannada Duniya

ಎಲೆಕ್ಷನ್ ಎಫೆಕ್ಟ್: ATM ಗಳಲ್ಲಿ ಸಿಗ್ತಿಲ್ಲ ಹಣ, ಪರದಾಡ್ತಿದ್ದಾರೆ ಜನ

ವಿಧಾನಸಭೆ ಚುನಾವಣೆಯಲ್ಲಿ ಹಣದ ಹರಿವು ಹೆಚ್ಚಾಗಿದೆ. ಇದೇ ವೇಳೆ ಬ್ಯಾಂಕ್, ಎ.ಟಿ.ಎಂ.ಗಳಲ್ಲಿ ಹಣಕ್ಕಾಗಿ ಜನ ಕ್ಯೂ ನಿಲ್ಲುವಂತಾಗಿದೆ.

ಮದುವೆ, ಗೃಹಪ್ರವೇಶ ಮೊದಲಾದ ಕಾರ್ಯಗಳಿಗೆ ದೊಡ್ಡ ಮೊತ್ತದ ಹಣ ಬೇಕಾದಲ್ಲಿ ಬ್ಯಾಂಕ್ ಗೆ ಹೋಗಬೇಕಿದೆ. ಇನ್ನು ಬೇರೆಯವರಿಂದ ಸಾಲ ಪಡೆದರೂ ಸೂಕ್ತವಾದ ದಾಖಲೆ ಹೊಂದಿರಬೇಕು. ನೀತಿ ಸಂಹಿತೆ ಕಾರಣದಿಂದ ದೊಡ್ಡ ಮೊತ್ತದ ಹಣ ಸಾಗಿಸುವಂತಿಲ್ಲ.

ಕಡಿಮೆ ಮೊತ್ತದ ಹಣ ಪಡೆಯಲು ಎ.ಟಿ.ಎಂ.ಗಳಿಗೆ ಹೋದರೆ, ಬಹುತೇಕ ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ಹಾಕಲಾಗಿದೆ. ಕೆಲವು ಎ.ಟಿ.ಎಂ.ಗಳಲ್ಲಿ ಹಣ ಇದ್ದರೂ, ಸರದಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಕ್ಯೂನಲ್ಲಿ ನಿಂತರೂ ಹಣ ಸಿಗುವ ಖಾತ್ರಿ ಇಲ್ಲವಾಗಿದೆ. ಅನೇಕ ಎ.ಟಿ.ಎಂ.ಗಳಲ್ಲಿ ಹಣ ತುಂಬಿಸಿದ ಒಂದೆರಡು ಗಂಟೆಯಲ್ಲೇ ಖಾಲಿಯಾಗುತ್ತಿದೆ.

ನಗದು ಪೂರೈಕೆಯಲ್ಲಿ ಕೊರತೆಯಾಗಿ ಹೆಚ್ಚಿನ ಎ.ಟಿ.ಎಂ.ಗಳಿಗೆ ಹಣ ಹಾಕುತ್ತಿಲ್ಲ. ಬಹುತೇಕ ಎ.ಟಿ.ಎಂ.ಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣ ಸಿಗುತ್ತಿವೆ.

ಸಾಮಾನ್ಯವಾಗಿ ಹೆಚ್ಚಿನ ಜನ ಎ.ಟಿ.ಎಂ.ಗಳನ್ನೇ ಅವಲಂಬಿಸಿರುತ್ತಾರೆ. ಬೇರೆ ಊರಿಗೆ ಹೋದ ಸಂದರ್ಭದಲ್ಲಿ ಎ.ಟಿ.ಎಂ.ಗಳಲ್ಲಿ ಹಣ ಸಿಗದೇ ಪರದಾಡುವಂತಾಗಿದೆ. ಪಾಸ್ ಬುಕ್ ನೊಂದಿಗೆ ಹಣ ಪಡೆಯಲು ಬ್ಯಾಂಕ್ ಗೆ ಹೋದ್ರೂ ಗಂಟೆಗಟ್ಟಲೆ ಕಾಯಬೇಕಿದೆ. ಚುನಾವಣೆ ಕಾರಣದಿಂದ ಮೊದಲೇ ಹಣ ಶೇಖರಿಸಿಡಲಾಗುತ್ತಿದ್ದು, ಇದರ ಪರಿಣಾಮ ಎ.ಟಿ.ಎಂ.ಗಳಲ್ಲಿ ನಗದು ಕೊರತೆ ಕಂಡು ಬಂದಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...