alex Certify
ಕನ್ನಡ ದುನಿಯಾ       Mobile App
       

Kannada Duniya

ಚಂದ್ರ ಕಾಣದ ಕಾರಣ ಇಲ್ಲಿ ಶನಿವಾರ ನಡೆಯಲಿದೆ ಈದ್

ದೇಶದ ದಕ್ಷಿಣ ಭಾರತದ ಕರಾವಳಿ ಹೊರತುಪಡಿಸಿ ಉಳಿದ ಭಾಗದಲ್ಲಿ ಚಂದ್ರ ಕಾಣಿಸದ ಕಾರಣ ಈದ್ ಶುಕ್ರವಾರದ ಬದಲು ಶನಿವಾರ ಆಚರಿಸಲು ನಿರ್ಧರಿಸಲಾಗಿದೆ. ಜಮಾ ಮಸೀದಿಯಲ್ಲಿ ನಡೆದ ಸಭೆ ನಂತ್ರ ಈ ಘೋಷಣೆ ಮಾಡಲಾಗಿದೆ.

ಗುರುವಾರ ಚಂದ್ರ ಕಾಣಿಸಲಿಲ್ಲ. ಹಾಗಾಗಿ ಶುಕ್ರವಾರ ಈದ್ ಆಚರಣೆ ಮಾಡುವುದಿಲ್ಲ. ಶುಕ್ರವಾರ ರಾತ್ರಿ ಚಂದ್ರನನ್ನು ನೋಡಿ ಶನಿವಾರ ಈದ್ ಆಚರಿಸಲಾಗುವುದು ಎಂದು ಸಭೆ ನಂತ್ರ ಘೋಷಣೆ ಮಾಡಲಾಗಿದೆ. ಫತೇಪುರಿ ಮಸೀದಿಯ ಶಾಹಿ ಇಮಾಮ್ ಮುಫ್ತಿ ಮುಕ್ರಮ್ ಅಹ್ಮದ್ ಪಿಟಿಐ ಜೊತೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ರಂಜಾನ್ ನ ಕೊನೆ ರೋಜಾವನ್ನು ಶುಕ್ರವಾರ ಮಾಡಲಾಗುವುದು ಎಂದು ಮುಕ್ರಮ್ ಅಹ್ಮದ್ ತಿಳಿಸಿದ್ದಾರೆ.

ಅರೇಬಿಯಾದ ಹಳೆ ಸಂಪ್ರದಾಯವನ್ನು ಅನೇಕ ಮುಸ್ಲಿಂಮರು ಈಗ್ಲೂ ಆಚರಿಸಿಕೊಂಡು ಬರ್ತಿದ್ದಾರೆ. ಸೌದಿಯಲ್ಲಿ ಚಂದ್ರ ಕಾಣಿಸಿಕೊಂಡ ಒಂದು ದಿನ ನಂತ್ರ ಭಾರತದಲ್ಲಿ ರೋಜಾ ಶುರುವಾಗುತ್ತದೆ. ಆದ್ರೆ ಈ ಬಾರಿ ಮೇ 16ರಂದು ಸೌದಿ ಹಾಗೂ ಭಾರತದಲ್ಲಿ  ಚಂದ್ರ ಕಾಣಿಸಿಕೊಂಡಿದ್ದಾನೆ ಎನ್ನಲಾಗಿದೆ. ಕೆಲವರು ಮೇ 17 ರಿಂದ ರೋಜಾ ಶುರು ಮಾಡಿದ್ರೆ ಮತ್ತೆ ಕೆಲವರು ಮೇ 18ರಿಂದ ರೋಜಾ ಶುರು ಮಾಡಿದ್ದರು. ರಂಜಾನ್ ನಲ್ಲಿ 20 ರಿಂದ 30 ರೋಜಾ ಇರುತ್ತದೆ. ಚಂದ್ರ ಕಾಣುವುದ್ರ ಮೇಲೆ ಇದು ನಿರ್ಧಾರವಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...