alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಆ್ಯಪ್ ಡೌನ್ಲೋಡ್ ಮಾಡಿ, 1 ಲಕ್ಷ ರೂ. ಗೆಲ್ಲಿ….

ಗೂಗಲ್ ಡಿಜಿಟಲ್ ಪೇಮೆಂಟ್ ಆ್ಯಪ್ ‘Tez’ ಅನ್ನು ಸೆಪ್ಟೆಂಬರ್ 18ರಂದು ಭಾರತದಲ್ಲಿ ಲಾಂಚ್ ಮಾಡಲಾಗಿತ್ತು. ಈಗಾಗ್ಲೇ ಪ್ಲೇ ಸ್ಟೋರ್ ನಲ್ಲಿ ಈ ಆ್ಯಪನ್ನು 50 ಲಕ್ಷ ಜನರು ಡೌನ್ಲೋಡ್ ಮಾಡಿದ್ದಾರೆ. Tez ಲಾಂಚ್ ಆಗಿ 24 ಗಂಟೆಗಳೊಳಗೆ 4 ಲಕ್ಷಕ್ಕೂ ಅಧಿಕ ಆ್ಯಕ್ಟಿವ್ ಯೂಸರ್ ಗಳಿದ್ರು.

ಭಾರತ ಸರ್ಕಾರ ಬೆಂಬಲಿತ UPI ಮೇಲೆ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ. ಬಳಕೆದಾರರು ತಮ್ಮ ಬ್ಯಾಂಕ್ ನಿಂದ ಹಣವನ್ನು ನೇರವಾಗಿ ಈ ಆ್ಯಪ್ ಮೂಲಕ ಟ್ರಾನ್ಸ್ ಫರ್ ಮಾಡಬಹುದು. ವಹಿವಾಟಿಗೆ ಯಾವುದೇ ಶುಲ್ಕ ವಿಧಿಸುವುದಿಲ್ಲ. ವಿಶೇಷ ಅಂದ್ರೆ ಸೆಪ್ಟೆಂಬರ್ ನಲ್ಲಿ ಈ ಆ್ಯಪ್ ಮೂಲಕ 3 ಕೋಟಿಗೂ ಅಧಿಕ ವಹಿವಾಟು ನಡೆದಿತ್ತು.

Tez ಆ್ಯಪ್ ಕಾರ್ಯಾಚರಣೆಗಾಗಿ ಆ್ಯಕ್ಸಿಸ್ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಹಾಗೂ ಎಸ್ ಬಿ ಐ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲಾಗಿದೆ. ಈ ಆ್ಯಪ್ ಮೂಲಕ ಹಣ ಗೆಲ್ಲುವ ಅವಕಾಶವೂ ಇದೆ. ರೆಫರಲ್ ಲಿಂಕ್ ಸಹಾಯದಿಂದ ನೀವು ಆ್ಯಪ್ ಡೌನ್ಲೋಡ್ ಮಾಡಿಕೊಂಡ್ರೆ, ಮೊದಲ ಪೇಮೆಂಟ್ 50 ರೂ.ಗಿಂತ ಅಧಿಕವಾಗಿದ್ದಲ್ಲಿ ರೆಫರ್ ಮಾಡಿದವರಿಗೆ ಹಾಗೂ ನಿಮಗೆ 51 ರೂ. ಬೋನಸ್ ರೂಪದಲ್ಲಿ ಸಿಗುತ್ತದೆ.

ಜೊತೆಗೆ ಸ್ಕ್ರಾಚ್ ಕಾರ್ಡ್ ಕೊಡಲಾಗುತ್ತದೆ. ಅದೃಷ್ಟವಿದ್ರೆ ಅದರಲ್ಲೂ ಹಣ ಸಿಗಬಹುದು. ಪ್ರತಿ ವಾರ 1 ಲಕ್ಷ ರೂ. ಲಕ್ಕಿ ಡ್ರಾ ಕೂಡ ಇರುತ್ತದೆ. ಪ್ರತಿ ಹಣಕಾಸು ವರ್ಷಕ್ಕೆ 9000 ರೂಪಾಯಿ ಕೊಡಲಾಗುತ್ತದೆ. 2018ರ ಎಪ್ರಿಲ್ 1ರವರೆಗೆ ಮಾತ್ರ ಈ ಆಫರ್ ಲಭ್ಯ. ಹಿಂದಿ, ಕನ್ನಡ, ಬೆಂಗಾಲಿ, ಗುಜರಾತಿ, ಇಂಗ್ಲಿಷ್, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಈ ಆ್ಯಪ್ ಲಭ್ಯ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...