alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಜುಗಡ್ಡೆಯಲ್ಲಿ ಮೂಡಿದ್ದಾಳೆ ದೇವಿ…!

durga-statue-made-with-iceನವರಾತ್ರಿಯಲ್ಲಿ ಎಲ್ಲೆಡೆ ದೇವಿಯ ಮೂರ್ತಿಯನ್ನಿಟ್ಟು ಪೂಜೆ, ವ್ರತಾದಿಗಳನ್ನು ಕೈಗೊಳ್ಳಲಾಗುತ್ತದೆ. ಕೋಲ್ಕತ್ತಾದಲ್ಲಿ ಕೂಡ ದೇವಿಯ ಮೂರ್ತಿಯನ್ನು ಸ್ಥಾಪಿಸಲಾಗಿದೆ. ಅಲ್ಲಿನ ದೇವಿಯ ಮೂರ್ತಿ ಮಂಜುಗಡ್ಡೆಯಿಂದ ನಿರ್ಮಾಣವಾಗಿದೆ.!

ಕೋಲ್ಕತ್ತಾದ ರಾಜಾರ್ಹಾಟ್ ನ್ಯೂಟೌನ್ ನಲ್ಲಿನ ಸ್ನೋ ಪಾರ್ಕ್ ನಲ್ಲಿ, ಮಂಜುಗಡ್ಡೆಯಿಂದ ನಿರ್ಮಿಸಿರುವ ಪಾರದರ್ಶಕ ಮೂರ್ತಿಯನ್ನು ನೋಡಬಹುದು. ಈ ಅಪರೂಪದ ದೇವಿಯ ಮೂರ್ತಿ ಈಗ ಎಲ್ಲರ ಆಕರ್ಷಣೆಯ ಕೇಂದ್ರವಾಗಿದೆ.

ಮಂಜುಗಡ್ಡೆಯ ಮೂರ್ತಿಗಳು ಕರಗಬಾರದೆಂಬ ಕಾರಣಕ್ಕೆ ಸ್ನೋ ಪಾರ್ಕ್ ನ ತಾಪಮಾನವನ್ನು ಮೈನಸ್ 6 ಡಿಗ್ರಿ ಸೆಲ್ಸಿಯಸ್ ನಲ್ಲಿ ಇಡಲಾಗಿದೆ. ಇಲ್ಲಿ ದುರ್ಗೆ, ಲಕ್ಷ್ಮಿ, ಸರಸ್ವತಿ, ಗಣೇಶ, ಕಾರ್ತೀಕ ಮುಂತಾದ ದೇವರ ಮೂರ್ತಿಗಳನ್ನು ಮಂಜುಗಡ್ಡೆಯಿಂದ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...