alex Certify
ಕನ್ನಡ ದುನಿಯಾ       Mobile App
       

Kannada Duniya

ಬಸ್ಸುಗಳಲ್ಲಿ ಇಂದು ಮಹಿಳೆಯರಿಗೆ ಉಚಿತ ಪ್ರಯಾಣ; ಯಾಕೆ ಗೊತ್ತಾ?

ಉತ್ತರ ಭಾರತದಲ್ಲಿ ಆಚರಿಸಲ್ಪಡುವ ಭಾಯಿ ದೂಜ್ ಹಬ್ಬದ ಪ್ರಯುಕ್ತ ದೆಹಲಿ ಸಾರಿಗೆ ಸಂಸ್ಥೆ(ಡಿಟಿಸಿ) ಮಹಿಳೆಯರಿಗಾಗಿ ಶುಕ್ರವಾರ(ನ.9) ರಾಷ್ಟ್ರರಾಜಧಾನಿಯಲ್ಲಿ ಉಚಿತ ಪ್ರಯಾಣದ ಅವಕಾಶವನ್ನು ಕಲ್ಪಿಸಿದೆ.

ದೀಪಾವಳಿಯ ಮಾರನೇ ದಿನ ಆಚರಿಸಲ್ಪಡುವ ಭಾಯಿ ದೂಜ್ ಹಬ್ಬದಂದು ಮಹಿಳೆಯರು ತಮ್ಮ ಸಹೋದರರ ಒಳಿತಿಗಾಗಿ ಉಪವಾಸ ವ್ರತವನ್ನು ಆಚರಿಸುತ್ತಾರೆ. ಈ ದಿನದಂದು ಬೆಳಗ್ಗೆ 8 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಡಿಟಿಸಿಯು ತನ್ನ ಎಲ್ಲಾ ಎಸಿ ಮತ್ತು ಎಸಿರಹಿತ ಬಸ್ ಗಳಲ್ಲಿ ಎಲ್ಲಾ ವಯೋಮಾನದ ಮಹಿಳೆಯರೂ ಟಿಕೆಟ್ ತೆಗೆದುಕೊಳ್ಳದೆ ಪ್ರಯಾಣಿಸಬಹುದು ಎಂಬುದಾಗಿ ತಿಳಿಸಿದೆ.

ಈ ಸಂದರ್ಭದಲ್ಲಿ ಪ್ರಯಾಣಿಕರ ಸಂದಣಿಯನ್ನು ನಿಯಂತ್ರಿಸುವ ಸಲುವಾಗಿ ದೆಹಲಿ ಸರ್ಕಾರದ ನೆರವಿನೊಂದಿಗೆ ದೆಹಲಿ ಸಾರಿಗೆ ಸಂಸ್ಥೆ ಹೆಚ್ಚುವರಿ ಬಸ್ ಗಳನ್ನು ಬಿಟ್ಟಿದೆ. ಅಂದಹಾಗೆ ಈ ಕೊಡುಗೆ ಕೇವಲ ಮಹಿಳೆಯರಿಗೆ ಮಾತ್ರವಾಗಿದ್ದು, ಅವರೊಂದಿಗೆ ಪ್ರಯಾಣಿಸುವ ಮಕ್ಕಳಿಗೆ ಇರುವುದಿಲ್ಲ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...