alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಎಲ್ ಹೊಂದಿರುವವರು ತಪ್ಪದೆ ಓದಿ ಈ ಸುದ್ದಿ

ನೀವು ಯಾವುದೇ ವಾಹನ ಓಡಿಸುತ್ತಿರಬಹುದು, ಚಾಲಕ-ಮಾಲೀಕ ಯಾವುದೇ ಊರಿನವನಾಗಿರಬಹುದು. ಆದರೆ ಇನ್ನು ಮುಂದೆ ಚಾಲನಾ ಪರವಾನಗಿ (ಡ್ರೈವಿಂಗ್ ಲೈಸೆನ್ಸ್)ಗಳು ದೇಶಾದ್ಯಂತ ಒಂದೇ ತೆರನಾದ್ದಾಗಿರುತ್ತವೆ.

ಮಾತ್ರವಲ್ಲ ವಾಹನ ನೋಂದಣಿ ಪ್ರಮಾಣಪತ್ರ(ರಿಜಿಸ್ಟ್ರೇಷನ್ ಸರ್ಟಿಫಿಕೇಟ್)ಗಳು ಕೂಡ ಒಂದೇ ಮಾದರಿಯ ವಿನ್ಯಾಸ ಹೊಂದಿರುತ್ತವೆ. 2019 ರ ಜುಲೈನಿಂದಲೇ ಇದು ಜಾರಿಗೆ ಬರಲಿದ್ದು, ಆ ಬಳಿಕ ಭಾರತದ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ ನೀಡಲಾಗುವ ಡಿಎಲ್ ಮತ್ತು ಆರ್‍ಸಿಗಳು ಒಂದೇ ವಿನ್ಯಾಸ ಹೊಂದಿರುತ್ತವೆ.

ವಿನ್ಯಾಸ ಮಾತ್ರವಲ್ಲದೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇವು ಹೆಚ್ಚು ಸುರಕ್ಷತೆ ಹಾಗೂ ಭದ್ರತೆಯನ್ನೂ ಒಳಗೊಂಡಿರುತ್ತವೆ. ಇವು ಇನ್ನಷ್ಟು ಸ್ಮಾರ್ಟ್ ಆಗಿರಲಿದ್ದು, ಮೈಕ್ರೋಚಿಪ್, ಕ್ಯೂಆರ್ ಕೋಡ್‍ಗಳನ್ನು ಕೂಡ ಹೊಂದಿರುತ್ತವೆ. ಅಲ್ಲದೆ ನಿಯರ್ ಫೀಲ್ಡ್ ಕಮ್ಯುನಿಕೇಷನ್ ತಂತ್ರಜ್ಞಾನವೂ ಇದರಲ್ಲಿ ಇರಲಿದ್ದು, ಅಧಿಕಾರಿಗಳು ತಮ್ಮ ಬಳಿ ಇರುವ ಉಪಕರಣಗಳ ಮೂಲಕ ಒಂದೇ ಟಚ್‍ನಲ್ಲಿ ಕಾರ್ಡ್‍ನಲ್ಲಿನ ಮಾಹಿತಿ ಪಡೆಯಬಹುದಾಗಿದೆ.

ದೇಶದಲ್ಲಿ ಪ್ರತಿದಿನ 32,000 ಡಿಎಲ್‍ಗಳನ್ನು ಹೊಸದಾಗಿ ಆಥವಾ ನವೀಕರಿಸಿ ನೀಡಲಾಗುತ್ತದೆ. ಹಾಗೆಯೇ 43,000 ವಾಹನಗಳ ನೋಂದಣಿ ಅಥವಾ ಮರು ನೋಂದಣಿ ಆಗುತ್ತದೆ. ಈ ಸಂದರ್ಭದಲ್ಲಿ ಈಗ ಉದ್ದೇಶಿಸಲಾಗಿರುವ ಹೊಸ ಡಿಎಲ್ ಹಾಗೂ ಆರ್‍ಸಿಗಳನ್ನು ನೀಡುವ ಮೂಲಕ ಕ್ರಮೇಣ ಎಲ್ಲರಿಗೂ ನೂತನ ಡಿಎಲ್-ಆರ್‍ಸಿ ಲಭ್ಯವಾಗುವಂತೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...