alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲಿಯೇ ಡಿಎಲ್ ಜೊತೆ ಲಿಂಕ್ ಆಗಲಿದೆ ಆಧಾರ್

ಚಾಲನಾ ಪರವಾನಿಗೆ ಜೊತೆಯೂ ಆಧಾರ್ ಶೀಘ್ರದಲ್ಲಿಯೇ ಜೋಡಣೆಯಾಗಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಮುಂದೆ ಹೇಳಿಕೆ ನೀಡಿದೆ. ಚಾಲನಾ ಪರವಾನಿಗೆಯಲ್ಲಾಗುತ್ತಿರುವ ಅಕ್ರಮ ತಡೆಯಲು ಆಧಾರ್ ಅನಿವಾರ್ಯ ಮಾಡುವುದಾಗಿ ಕೇಂದ್ರ ಹೇಳಿದೆ. ಇದಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳ ವ್ಯಾಪ್ತಿಗೆ ಬರುವಂತೆ ಸಾಫ್ಟ್ವೇರ್ ಒಂದನ್ನು ಸಿದ್ಧಪಡಿಸ್ತಿದೆ.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ನ್ಯಾಯಾಲಯ ನೇಮಕ ಮಾಡಿರುವ ಸಮಿತಿ ನ್ಯಾಯಮೂರ್ತಿ ಬಿ.ಲೋಕೂರ್ ಪೀಠದ ಮುಂದೆ ಹೇಳಿಕೆ ನೀಡಿದೆ. ನ್ಯಾಯಾಲಯ ನೇಮಕ ಮಾಡಿರುವ ಈ ಸಮಿತಿ ನೀಡಿರುವ ಸೂಚನೆಗಳು ಮಹತ್ವ ಪಡೆದಿವೆ. ಹಿಂದಿನ ವರ್ಷ ನವೆಂಬರ್ 28ರಂದು ಸಮಿತಿ ಸರ್ಕಾರಿ ಅಧಿಕಾರಿಗಳ ಜೊತೆ ಸಭೆ ನಡೆಸಿದೆಯಂತೆ. ಈ ವೇಳೆ ನಕಲಿ ಪರವಾನಿಗೆ ಬಗ್ಗೆ ಚರ್ಚೆ ನಡೆದಿದೆ ಎಂದು ವರದಿಯಲ್ಲಿ ಹೇಳಿದೆ.

ಶೀಘ್ರದಲ್ಲಿಯೇ ಎಲ್ಲ ಚಾಲನಾ ಪರವಾನಿಗೆ ಆಧಾರ್ ಜೊತೆ ಲಿಂಕ್ ಆಗಲಿದೆ. ಇದು ಜಾರಿಗೆ ಬಂದಲ್ಲಿ ನಕಲಿ ಪರವಾನಿಗೆ ಮೇಲೆ ಕಡಿವಾಣ ಬೀಳಲಿದೆ.

 

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...