alex Certify
ಕನ್ನಡ ದುನಿಯಾ       Mobile App
       

Kannada Duniya

ಏ.1 ರಿಂದ ಬದಲಾಗಲಿದೆ ಚಾಲನಾ ಪರವಾನಿಗೆ ನಿಯಮ

ಹೊಸ ಹಣಕಾಸು ವರ್ಷ 2018-2019 ರ ಆರಂಭದಲ್ಲಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವವರಿಗೊಂದು ಖುಷಿ ಸುದ್ದಿ. ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ಡಿಎಲ್ ನಿಯಮವನ್ನು ಸುಲಭಗೊಳಿಸಿದೆ. ಮೋಟಾರು ವಾಹನ ಕಾಯ್ದೆ 1989ರಲ್ಲಿ ತಿದ್ದುಪಡಿ ಮಾಡಿ ಡಿಎಲ್ ನಿಯಮವನ್ನು ಸುಲಭಗೊಳಿಸಿದೆ.

ಈ ಬದಲಾವಣೆ ಏಪ್ರಿಲ್ 1,2018 ರಿಂದ ಜಾರಿಗೆ ಬರಲಿದೆ. ಹೊಸ ತಿದ್ದುಪಡಿಯಿಂದಾಗಿ ಜನರಿಗೆ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದು ಸುಲಭವಾಗಲಿದೆ. ಜೊತೆಗೆ ನಕಲಿ ಡಿಎಲ್ ಗೆ ಬ್ರೇಕ್ ಬೀಳಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾರ್ಚ್ 20ರಂದು ಈ ಬಗ್ಗೆ ಮಾಹಿತಿ ನೀಡಿದೆ.

ಏಪ್ರಿಲ್ 1,2018 ರಿಂದ ಕಲಿಕೆ ಡಿಎಲ್, ಹೊಸ ಡಿಎಲ್, ಡಿಎಲ್ ನವೀಕರಣ, ಹೆಸರು, ವಿಳಾಸ ಬದಲಾವಣೆಗೆ ಬೇರೆ ಬೇರೆ ಫಾರ್ಮ್ ತುಂಬುವ ಅಗತ್ಯವಿಲ್ಲ. ಈ ಎಲ್ಲ ಕೆಲಸಕ್ಕೂ ಒಂದೇ ಫಾರ್ಮ್, ಫಾರ್ಮ್-2 ತುಂಬಿದ್ರೆ ಸಾಕು. ಏಪ್ರಿಲ್ 1ರ ನಂತ್ರ ಆಧಾರ್ ಇಲ್ಲದೆ ಡಿಎಲ್ ತಯಾರಿಸಲು ಸಾಧ್ಯವಿಲ್ಲ. ಫಾರ್ಮ್-2ನಲ್ಲಿ ಆಧಾರ್ ಸಂಖ್ಯೆಯನ್ನು ತುಂಬಬೇಕಾಗುತ್ತದೆ.

ಅಂಗದಾನಕ್ಕೂ ಅರ್ಜಿಯಲ್ಲಿ ಅವಕಾಶ ನೀಡಲಾಗಿದೆ. ವ್ಯಕ್ತಿ ಬಯಸಿದ್ರೆ ಮರಣದ ನಂತ್ರ ಅಂಗದಾನ ಮಾಡುತ್ತೇನೆಂದು ಆಯ್ಕೆ ಜಾಗದಲ್ಲಿ ತುಂಬಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...