alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ರೈವಿಂಗ್ ಲೈಸೆನ್ಸ್, ಶುಭ ಸುದ್ದಿ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಡ್ರೈವಿಂಗ್ ಲೈಸೆನ್ಸ್(ಚಾಲನಾ ಪರವಾನಿಗಿ) ವಿಚಾರವಾಗಿ ಕೇಂದ್ರ ಸರ್ಕಾರ ಶುಭ ಸುದ್ದಿಯೊಂದನ್ನು ನೀಡಿದೆ.

ವಾಣಿಜ್ಯ ಉದ್ದೇಶಗಳಿಗಾಗಿ ಬಳಸಲಾಗುವ ದ್ವಿಚಕ್ರವಾಹನ, ಲಘುವಾಹನಗಳು, ಟ್ಯಾಕ್ಸಿ ಚಾಲಕರು ಖಾಸಗಿ ಲೈಸೆನ್ಸ್ ಬಳಸಬಹುದಾಗಿದೆ. ಲಘು ವಾಹನಗಳ ಚಾಲಕರಿಗೆ ಖಾಸಗಿ ವಾಹನಗಳಿಗೆ ನೀಡುವ ಲೈಸೆನ್ಸ್ ವಿತರಿಸುವಂತೆ ಕೇಂದ್ರ ಸರ್ಕಾರದಿಂದ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಲಾಗಿದೆ.

ಬಸ್, ಟ್ರಕ್ ಸೇರಿದಂತೆ ಮಧ್ಯಮ ಮತ್ತು ಭಾರೀ ಗಾತ್ರದ ವಾಹನಗಳ ಚಾಲನೆ ಮಾಡುವವರಿಗೆ ವಾಣಿಜ್ಯ ಡ್ರೈವಿಂಗ್ ಲೈಸೆನ್ಸ್ ಅಗತ್ಯವಾಗಿದೆ ಎಂದು ಹೇಳಲಾಗಿದೆ.

ಸುಪ್ರೀಂ ಕೋರ್ಟ್ ಆದೇಶದಂತೆ ವಾಣಿಜ್ಯ ಉದ್ದೇಶಗಳಿಗೆ ಬಳಸುವ ದ್ವಿಚಕ್ರವಾಹನ, ಲಘು ವಾಹನ, ಟ್ಯಾಕ್ಸಿ ಚಾಲಕರುಗಳಿಗೆ ಖಾಸಗಿ ವಾಹನಗಳಿಗೆ ನೀಡುವ ಲೈಸೆನ್ಸ್ ಅನ್ನೇ ವಿತರಿಸಲು ಕೇಂದ್ರ ಸರ್ಕಾರ ಸೂಚಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...