alex Certify
ಕನ್ನಡ ದುನಿಯಾ       Mobile App
       

Kannada Duniya

ಸೆ.6 ರಂದು ಉರ್ಜಿತ್ ಪಟೇಲ್ ಅಧಿಕಾರ ಸ್ವೀಕಾರ

urjit-pat

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್(ಆರ್.ಬಿ.ಐ) ರಘುರಾಮ್ ರಾಜನ್, ಅವರ ಅವಧಿ ಸೆಪ್ಟಂಬರ್ 4ಕ್ಕೆ ಮುಕ್ತಾಯವಾಗಿದೆ. ಅವರಿಂದ ತೆರವಾದ ಸ್ಥಾನಕ್ಕೆ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ.

ಆರ್.ಬಿ.ಐ. ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ಉರ್ಜಿತ್ ಪಟೇಲ್ ಸೆಪ್ಟಂಬರ್ 6 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸೆಪ್ಟಂಬರ್ 4 ರಂದು ಭಾನುವಾರ, 5 ರಂದು ಗಣೇಶ ಚತುರ್ಥಿ ಹಿನ್ನಲೆಯಲ್ಲಿ 6 ರಂದು ಅವರು, ರಘುರಾಮ್ ರಾಜನ್ ಅವರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಉರ್ಜಿತ್ ಪಟೇಲ್ ಅವರು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾದ ಯೋಜನೆಗಳನ್ನು ರೂಪಿಸಲಿದ್ದಾರೆ ಎಂದು ಹೇಳಲಾಗಿದೆ..

ರಘುರಾಮ್ ರಾಜನ್, ರೂಪಾಯಿ ಮೌಲ್ಯಕ್ಕೆ ಸ್ಥಿರತೆ ತರಲು ಶ್ರಮಿಸಿದ್ದರು. ಅಲ್ಲದೇ, ಹಣಕಾಸು ನೀತಿಯಲ್ಲಿ ಪಾರ್ದರ್ಶಕತೆ ತಂದಿದ್ದಲ್ಲದೇ, ಹೊಸ ಬ್ಯಾಂಕ್ ಗಳಿಗೆ ಅನುಮತಿ ಕೊಟ್ಟಿದ್ದರು. ಅದೇ ರೀತಿ ಉರ್ಜಿತ್ ಪಟೇಲ್ ಕೂಡ ಹೊಸ ಕ್ರಮಗಳನ್ನು ಅನುಸರಿಸಲಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...