alex Certify
ಕನ್ನಡ ದುನಿಯಾ       Mobile App
       

Kannada Duniya

‘ಆಧಾರ್’ ಗೌಪ್ಯತೆ ಕುರಿತು ಯುಐಡಿಎಐ ನೀಡಿದೆ ಮಹತ್ವದ ಸೂಚನೆ

ಆಧಾರ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣ ಅಥವಾ ಇಂಟರ್ನೆಟ್ ಬಳಕೆ ಸಂದರ್ಭದಲ್ಲಿ ಸಾರ್ವತ್ರಿಕವಾಗಿ ಹಂಚಿಕೊಳ್ಳುವುದು ಸೂಕ್ತವಲ್ಲ ಎಂದು ಭಾರತದ ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ ಅಭಿಪ್ರಾಯಪಟ್ಟಿದೆ.

ಅನಧಿಕೃತ ಗೌಪ್ಯತೆ ದಾಳಿಯನ್ನು ತಡೆಗಟ್ಟಲು ಪ್ಯಾನ್, ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಮಾಹಿತಿಯನ್ನು ಹೇಗೆ ಬಹಿರಂಗಪಡಿಸುವುದಿಲ್ಲವೋ ಅದೇ ರೀತಿ ಆಧಾರ್ ಸಂಖ್ಯೆಯ ಗೌಪ್ಯತೆ ಕಾಪಾಡಬೇಕೆಂಬುದು ಯುಐಡಿಎಐನ ಸಲಹೆಯಾಗಿದೆ.

ತನ್ನ ಪೋರ್ಟಲ್ ನಲ್ಲಿ ಸಾಮಾನ್ಯವಾಗಿ ಕೇಳಿಬರುವ ಪ್ರಶ್ನೆಗೆ ಉತ್ತರ ನೀಡಿರುವ ಯುಐಡಿಎಐ, ಆಧಾರ್ ಮಾಹಿತಿ ಹಂಚಿಕೊಳ್ಳಬೇಡಿ ಎಂದರೆ ಅದು ಸಂರಕ್ಷಿತವಾಗಿಲ್ಲ ಎಂಬ ಅರ್ಥವಲ್ಲ. ಪ್ಯಾನ್, ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವಾಗ ವಹಿಸುವ ಎಚ್ಚರಿಕೆಯನ್ನು ಆಧಾರ್ ಬಳಸುವಾಗಲೂ ವಹಿಸಬೇಕು. ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಬಳಸಿ ಎಂದು ಸೂಕ್ಷ್ಮವಾಗಿ ಹೇಳಿದೆ.

ಬಹುತೇಕ ಜನರು ಸಾಮಾಜಿಕ ಡೊಮೈನ್ ಗಳಲ್ಲಿ ತಮ್ಮ ವೈಯಕ್ತಿಕ ವಿವರವನ್ನು ಸೀಮಿತಗೊಳಿಸುವ ರೀತಿಯಲ್ಲೇ ಆಧಾರ್ ಸಂಖ್ಯೆಯನ್ನು ಬಳಸಿಕೊಳ್ಳಬೇಕೆಂದು ಸಂಸ್ಥೆ ತಿಳಿಸಿದೆ.

ಅಂದ ಹಾಗೆ ಟ್ರಾಯ್ ಅಧ್ಯಕ್ಷರು ತಮ್ಮ ಆಧಾರ್ ಸಂಖ್ಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಸವಾಲು ಹಾಕಿದ್ದು. ಈ ಬೆಳವಣಿಗೆ ಬಳಿಕ ಸಾಕಷ್ಟು ಚರ್ಚೆಯೂ ನಡೆದಿತ್ತು.

ಇದೇ ವೇಳೆ ಆಧಾರ್ ಕಾರ್ಡನ್ನು ಯಾರೂ ಸಹ ದುರ್ಬಳಕೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಇತರೆ ಐಡಿ ಕಾರ್ಡ್ ಗಳಿಗಿಂತ ಆಧಾರ್ ಮೇಲೆ ಹೆಚ್ಚು ವಿಶ್ವಾಸ ಇಡಬಹುದು. ಆಧಾರ್ ಕಾನೂನು ಬದ್ಧ ಗುರುತಿನ ಚೀಟಿ. ಇದು ವ್ಯಕ್ತಿಯ ಬೆರಳಚ್ಚು, ಐರಿಸ್ ಸ್ಕ್ಯಾನ್, ಒಟಿಪಿ ದೃಢೀಕರಣ ಮತ್ತು ಕ್ಯೂಆರ್ ಕೋಡ್ ಮೂಲಕ ರಚನೆಯಾಗಿದೆ ಎಂದು ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...