alex Certify
ಕನ್ನಡ ದುನಿಯಾ       Mobile App
       

Kannada Duniya

ಎಚ್ಚರ ತಪ್ಪಿದ್ರೆ ಆಪತ್ತು: ಎಟಿಎಂ ಬಳಕೆದಾರರು ಓದಲೇ ಬೇಕಾದ ಸುದ್ದಿ

ಸೈಬರ್ ಅಪರಾಧ ಹೆಚ್ಚಾಗ್ತಿದೆ. ಎಟಿಎಂ ವಂಚನೆ ಪ್ರಕರಣದ ಜೊತೆಗೆ ಆನ್ಲೈನ್ ವ್ಯವಹಾರ ನಡೆಸುವವರ ಅಕೌಂಟ್ ಗಳನ್ನು ಹ್ಯಾಕ್ ಮಾಡಲಾಗ್ತಿದೆ. ಹೆಚ್ಚುತ್ತಿರುವ ಅಪರಾಧ ಪ್ರಕರಣವನ್ನು ಗಮನದಲ್ಲಿಟ್ಟುಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ಎಚ್ಚರಿಕೆಯಿಂದಿರುವಂತೆ ಸೂಚನೆ ನೀಡಿದೆ.

ಎಟಿಎಂನಿಂದ ಹಣ ಡ್ರಾ ಮಾಡುವಾಗ ಅಥವಾ ಎಟಿಎಂಗೆ ಸಂಬಂಧಿಸಿದಂತೆ ಯಾವುದೇ ಕೆಲಸ ಮಾಡುವಾಗ ಯಾವೆಲ್ಲ ಮುನ್ನೆಚ್ಚರಿಕೆ ವಹಿಸಬೇಕೆಂದು ಬ್ಯಾಂಕ್ ಹೇಳಿದೆ. ಬ್ಯಾಂಕ್ ತನ್ನ ಅಧಿಕೃತ ಟ್ವೀಟರ್ ನಲ್ಲಿ ಈ ಬಗ್ಗೆ ಎಚ್ಚರಿಕೆ ಟ್ವೀಟ್ ಮಾಡಿದೆ. ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಗೌಪ್ಯತೆಗೆ ಹೆಚ್ಚಿನ ಮಹತ್ವ ನೀಡಿ. ಬೇರೆಯವರು ಹಣ ಡ್ರಾ ಮಾಡುವಾಗ ಬಗ್ಗಿ ನೋಡಬೇಡಿ. ಹಾಗೆ ನೀವು ಹಣ ಡ್ರಾ ಮಾಡುವಾಗ ಕ್ಯಾಬಿನ್ ನಲ್ಲಿ ಬೇರೆಯವರು ಇರದಂತೆ ನೋಡಿಕೊಳ್ಳಿ ಎಂದು ಬ್ಯಾಂಕ್  ಟ್ವೀಟ್ ಮಾಡಿದೆ.

ಎಟಿಎಂ ಕಾರ್ಡನ್ನು ಸುರಕ್ಷಿತವಾಗಿಟ್ಟುಕೊಳ್ಳಿ. ಎಟಿಎಂನಲ್ಲಿ ಹಣ ಡ್ರಾ ಮಾಡಿದ ನಂತ್ರ ಅಥವಾ ಬ್ಯಾಲೆನ್ಸ್ ಚೆಕ್ ಮಾಡಿದ ನಂತ್ರ ಕ್ಯಾನ್ಸಲ್ ಬಟನ್ ಅವಶ್ಯಕವಾಗಿ ಒತ್ತಿ. ಪ್ರತಿ ವಹಿವಾಟಿನೊಂದಿಗೆ ಮಿನಿ ಸ್ಟೇಟ್ ಮೆಂಟ್ ಅವಶ್ಯಕವಾಗಿ ಪಡೆಯಿರಿ. ಬ್ಯಾಂಕ್ ಎಸ್ ಎಂ ಎಸ್ ಅಲರ್ಟ್ ಆಗಿರಲಿ. ಅವ್ಯವಹಾರ ನಡೆದ್ರೆ ತಕ್ಷಣ ನಿಮ್ಮ ಗಮನಕ್ಕೆ ಬರುತ್ತದೆ.

ಕಾರ್ಡ್ ಕೆಲಸ ಮಾಡ್ತಿಲ್ಲವೆಂದ್ರೆ ಬೇರೆ ಬೇರೆ ಎಟಿಎಂನಲ್ಲಿ ಪ್ರಯತ್ನ ಪಡಬೇಡಿ. ಹಾಗೆ ಸಾಮಾನ್ಯ ಪಾಸ್ವರ್ಡ್ ಇಟ್ಟುಕೊಳ್ಳಬೇಡಿ. ಅಪರಿಚಿತ ವ್ಯಕ್ತಿಗೆ ಕಾರ್ಡ್ ನೀಡಬೇಡಿ.ಎಟಿಎಂ ಬಳಸುವ ವೇಳೆ ಅಪರಿಚಿತನ ಸಹಾಯ ಪಡೆಯಬೇಡಿ. ಸುರಕ್ಷಿತೆಯಿಲ್ಲದ ಎಟಿಎಂ ಎಂದೂ ಬಳಸಬೇಡಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...