alex Certify
ಕನ್ನಡ ದುನಿಯಾ       Mobile App
       

Kannada Duniya

ಎ.ಟಿ.ಎಂ. ಕಾರ್ಡ್ ಬಳಸುವವರು ಓದಲೇಬೇಕಾದ ಸುದ್ದಿ

pass word

ನವದೆಹಲಿ: ಖಾಸಗಿ ಎ.ಟಿ.ಎಂ. ಗಳಿಂದ ಡೇಟಾ ಸೋರಿಕೆಯಾಗಿರುವ ಶಂಕೆ ಹಿನ್ನಲೆಯಲ್ಲಿ ಎ.ಟಿ.ಎಂ. ಪಿನ್ ಸಂಖ್ಯೆ ಬದಲಿಸುವಂತೆ ಗ್ರಾಹಕರಿಗೆ ಬ್ಯಾಂಕ್ ಗಳು ಸೂಚನೆ ನೀಡಿವೆ.

ಕೆಲವು ದಿನಗಳಿಂದ ಗ್ರಾಹಕರಿಗೆ ಮೆಸೇಜ್ ಮೂಲಕ ಎ.ಟಿ.ಎಂ. ಪಿನ್ ಸಂಖ್ಯೆ ಬದಲಿಸುವಂತೆ ಸೂಚಿಸಿವೆ. ಬ್ಯಾಂಕ್ ನಿಮಗೆ ಸೂಚನೆ ನೀಡದಿದ್ದರೂ, ನಿಮ್ಮ ಪಿನ್ ಸಂಖ್ಯೆಯನ್ನು ಬದಲಿಸುವುದು ಒಳ್ಳೆಯದೆಂದು ಹೇಳಲಾಗಿದೆ. ದೇಶದಲ್ಲಿ ಶೇ. 70 ರಷ್ಟು ಎ.ಟಿ.ಎಂ. ಗಳಲ್ಲಿ ಔಟ್ ಡೇಟೆಡ್ ಆಪರೇಟಿಂಗ್ ವ್ಯವಸ್ಥೆಯನ್ನು ಹೊಂದಿದ್ದು, ವಂಚಕರು ಇದನ್ನು ದುರ್ಬಳಕೆ ಮಾಡಿಕೊಳ್ಳಬಹುದಾದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಫೆಡರಲ್ ಬ್ಯಾಂಕ್, ಹೆಚ್.ಡಿ.ಎಫ್.ಸಿ. ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳು ಈಗಾಗಲೇ ಸಂದೇಶ ರವಾನಿಸಿವೆ. ಗ್ರಾಹಕರು ಎ.ಟಿ.ಎಂ. ಪಿನ್ ಸಂಖ್ಯೆಯನ್ನು ಬದಲಿಸುವುದು ಸೂಕ್ತ. ಜೊತೆಗೆ ಒಂದೇ ಪಿನ್ ಸಂಖ್ಯೆಯನ್ನು ಹಲವು ಸಾಧನಗಳಿಗೆ ಬಳಸಬಾರದು ಎಂದು ಸಲಹೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...