alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಡೊಮಿನೊ ಪಿಜ್ಜಾ ಜೊತೆ ಸಿಗಲಿದೆ ಈ ತಂಪು ಪಾನೀಯ

ಇನ್ಮುಂದೆ ಡೊಮಿನೊ ಪಿಜ್ಜಾ ಜೊತೆ ಕೋಕಾಕೋಲಾ ಸಿಗೋದಿಲ್ಲ. ಕೋಕಾಕೋಲಾ ಬದಲು ಪೆಪ್ಸಿ ಸಿಗುವ ಸಾಧ್ಯತೆ ಹೆಚ್ಚಿದೆ. ಕೋಕಾಕೋಲಾ ಜೊತೆಗಿರುವ 20 ವರ್ಷಗಳ ನಂಟನ್ನು ಡೊಮಿನೊ ಪಿಜ್ಜಾ ಕಡಿದುಕೊಳ್ಳಲಿದೆ.

ಜುಬಿಲ್ಯಾಂಟ್ ಫುಡ್ವರ್ಕ್ಸ್ ಕಂಪನಿ ಭಾರತದಲ್ಲಿ ಡೊಮಿನೊ ಪಿಜ್ಜಾ ಕಂಪನಿಯನ್ನು ನಡೆಸುತ್ತಿದೆ. ಜುಬಿಲ್ಯಾಂಟ್ ಫುಡ್ವರ್ಕ್ಸ್ ಪೆಪ್ಸಿ ಜೊತೆ ಒಪ್ಪಂದದ ಮಾತುಕತೆ ನಡೆಸುತ್ತಿದೆ. ವ್ಯವಹಾರದಲ್ಲಿ ಏಳ್ಗೆ ಕಾಣಲು ಕಂಪನಿ ಅನೇಕ ಆಯ್ಕೆಗಳನ್ನು ಹುಡುಕುತ್ತಿದೆ ಎನ್ನಲಾಗಿದೆ.

ಭಾರತದಲ್ಲಿ ಡೊಮಿನೊದ 1144 ಮಳಿಗೆಗಳಿವೆ. ಭಾರತದ ತ್ವರಿತ ರೆಸ್ಟೋರೆಂಟ್ ಪಟ್ಟಿಯಲ್ಲಿ ಇದು ಬರುತ್ತದೆ. 85 ದೇಶಗಳಲ್ಲಿ ಡೊಮಿನೊ ಮಳಿಗೆಗಳಿವೆ. ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಮಲೇಷ್ಯಾದಲ್ಲಿ ಮಾತ್ರ ಡೊಮಿನೊ ಜೊತೆ ಪೆಪ್ಸಿ ಒಪ್ಪಂದ ಮಾಡಿಕೊಂಡಿದೆ. ಉಳಿದ ದೇಶಗಳಲ್ಲಿ ಕೋಕಾಕೋಲಾ ಜೊತೆ ಒಪ್ಪಂದ ಮುಂದುವರೆದಿದೆ. ಭಾರತದಲ್ಲಿ ಡೊಮಿನೊ- ಕೋಕಾಕೋಲಾ ಒಪ್ಪಂದ ಜೂನ್ 30ಕ್ಕೆ ಮುಕ್ತಾಯವಾಗಿದೆ. ಆದ್ರೆ ಈವರೆಗೂ ಡೊಮಿನೊ ಪೆಪ್ಸಿ ಜೊತೆ ಒಪ್ಪಂದವನ್ನು ಅಂತಿಮ ಹಂತಕ್ಕೆ ತೆಗೆದುಕೊಂಡು ಹೋಗಿಲ್ಲ. ಆದ್ರೆ ಒಪ್ಪಂದ ನಿಶ್ಚಿತ ಎಂಬ ಮಾತುಗಳು ಕೇಳಿಬರ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...