alex Certify
ಕನ್ನಡ ದುನಿಯಾ       Mobile App
       

Kannada Duniya

ನೈಸರ್ಗಿಕ ಅನಿಲ ಬಳಕೆದಾರರಿಗೆ ಕಾದಿದೆ ಶಾಕ್…!

ವಾಹನ ಚಲಾಯಿಸಲು ನೈಸರ್ಗಿಕ ಅನಿಲ ಬಳಸುತ್ತಿರುವವರು ಹಾಗೂ ಅಡುಗೆ ಅನಿಲ ಬಳಕೆದಾರರ ಜೇಬಿಗೆ ಏಪ್ರಿಲ್ 1ರಿಂದ ಕತ್ತರಿ ಬೀಳಲಿದೆ. ಏಪ್ರಿಲ್ 1ರಂದು ಸ್ಥಳೀಯವಾಗಿ ಉತ್ಪಾದನೆಯಾಗುವ ನೈಸರ್ಗಿಕ ಅನಿಲದ ದರ ಪರಿಷ್ಕರಣೆಯಾಗಲಿದೆ. 2 ವರ್ಷಗಳಲ್ಲೇ ಅತಿ ಹೆಚ್ಚಿನ ಪ್ರಮಾಣದ ಏರಿಕೆ ಮಾಡುವ ಸಾಧ್ಯತೆ ಇದೆ.

ಸದ್ಯ ಪ್ರತಿ ಯೂನಿಟ್ ಗೆ 2.89 ಡಾಲರ್ ಇದೆ. ಪರಿಷ್ಕರಣೆ ಬಳಿಕ ಬೆಲೆ ಪ್ರತಿ ಯೂನಿಟ್ ಗೆ 3.06 ಡಾಲರ್ ನಷ್ಟಾಗುವ ಸಂಭವವಿದೆ. 2016ರ ಮಾರ್ಚ್ ನಲ್ಲೂ ಇದೇ ರೀತಿ ಬೆಲೆ ಏರಿಕೆ ಆಗಿತ್ತು. ಆಗ ಒಂದು ಯೂನಿಟ್ ಬೆಲೆ 3.32 ಡಾಲರ್ ಗೆ ತಲುಪಿತ್ತು.

ಬೆಲೆ ಏರಿಕೆಯಿಂದ ಗ್ರಾಹಕರಿಗೆ ಹೊಡೆತ ಬೀಳಲಿದೆ. ಆದ್ರೆ ಅನಿಲ ಕ್ಷೇತ್ರಗಳಲ್ಲಿ 10 ಬಿಲಿಯನ್ ಡಾಲರ್ ನಷ್ಟು ಭಾರೀ ಮೊತ್ತ ಹೂಡಿಕೆ ಮಾಡಲು ಮುಂದಾಗಿರುವ ಖಾಸಗಿ ಕಂಪನಿ ರಿಲಯೆನ್ಸ್ ಇಂಡಸ್ಟ್ರೀಸ್ ಹಾಗೂ ಸರ್ಕಾರಿ ಸಂಸ್ಥೆ ಓ ಎನ್ ಜಿ ಸಿ ಯಂತಹ ಕಂಪನಿಗಳು ಕೊಂಚ ನಿರಾಳವಾಗಲಿವೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...