alex Certify
ಕನ್ನಡ ದುನಿಯಾ       Mobile App
       

Kannada Duniya

ಯಾವ ವಿಮಾನ ನಿಲ್ದಾಣಕ್ಕೂ ಕಡಿಮೆಯಿಲ್ಲ ರೈಲ್ವೇಯ ಈ ಲಾಂಜ್

ದೆಹಲಿ ರೈಲು ನಿಲ್ದಾಣದ ಈ ಐಷಾರಾಮಿ ಲಾಂಜ್ ಯಾವ ವಿಮಾನ ನಿಲ್ದಾಣಕ್ಕೂ ಕಮ್ಮಿಯಿಲ್ಲ. ಡಿಲಕ್ಸ್ ಸೂಟ್ಸ್, ರಿಕ್ಲೈನಿಂಗ್ ಕುರ್ಚಿಗಳು, ಬಫೆ ಮೀಲ್ ಹೀಗೆ ಎಲ್ಲಾ ಬಗೆಯ ಸೌಲಭ್ಯಗಳೂ ಇಲ್ಲಿವೆ. ಪ್ಲಾಟ್ ಫಾರ್ಮ್ 16ರಲ್ಲಿರೋ ಈ ಲಾಂಜ್ ಕಳೆದ 6 ವರ್ಷಗಳಿಂದ್ಲೂ ಬಳಕೆಯಲ್ಲಿದೆ.

ವಿಮಾನ ನಿಲ್ದಾಣಗಳಂತೆ ರೈಲ್ವೆ ಸ್ಟೇಶನ್ ನಲ್ಲೂ ಅತ್ಯುತ್ತಮ ಸೌಲಭ್ಯಗಳನ್ನು ಕಲ್ಪಿಸಬೇಕು ಅನ್ನೋ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಈ ಲಾಂಜ್ ನಿರ್ಮಾಣ ಮಾಡಲಾಗಿತ್ತು. ದುರಂತ ಅಂದ್ರೆ ಇಲ್ಲಿ ದಿನಕ್ಕೆ ಕೇವಲ 150 ಪ್ರಯಾಣಿಕರು ವಿಸಿಟ್ ಕೊಡ್ತಾರೆ.

ಸದ್ಯ ವಿಜಯವಾಡ ಮತ್ತು ವಿಶಾಖಪಟ್ಟಣಂ ರೈಲ್ವೆ ನಿಲ್ದಾಣಗಳಲ್ಲೂ ಈ ರೀತಿಯ ಎಕ್ಸಿಕ್ಯೂಟಿವ್ ಲಾಂಜ್ ಗಳನ್ನು ನಿರ್ಮಾಣ ಮಾಡಲಾಗಿದೆ. ಸದ್ಯದಲ್ಲೇ ಆಗ್ರಾ ಮತ್ತು ಜೈಪುರ ರೈಲ್ವೆ ನಿಲ್ದಾಣಗಳಲ್ಲೂ ಇದೇ ರೀತಿಯ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತದೆ.

ಎಷ್ಟೋ ಪ್ರಯಾಣಿಕರಿಗೆ ದೆಹಲಿಯಲ್ಲಿ ಇಂಥದ್ದೊಂದು ಲಾಂಜ್ ಇದೆ ಅನ್ನೋದೇ ಗೊತ್ತಿಲ್ಲ. ಈ ಲಾಂಜ್ ನಲ್ಲಿ  2 ಗಂಟೆ ಕಾಲ ಕಳೆಯಲು 165 ರೂಪಾಯಿ ಪಾವತಿಸಬೇಕು. ಇಲ್ಲಿ ವೈಫೈ ಸೌಲಭ್ಯವೂ ಇದೆ. ಈ ಲಾಂಜ್ ಅನ್ನು ಇನ್ನಷ್ಟು ಜನಪ್ರಿಯಗೊಳಿಸಲು ರೈಲ್ವೆ ಇಲಾಖೆ ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...