alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರದ ಈ ವೆಬ್ ಸೈಟ್ ನಲ್ಲಿ ವಸ್ತುಗಳನ್ನು ಮಾರಾಟ ಮಾಡಿ ಕೈ ತುಂಬ ಸಂಪಾದಿಸಿ

ಕುಟುಂಬ ನಿರ್ವಹಣೆ ಸುಲಭವಾಗಲಿ ಎನ್ನುವ ಕಾರಣಕ್ಕೆ ಮನೆಯಲ್ಲಿರುವ ಬಹುತೇಕ ಮಹಿಳೆಯರು ಹೊಸ ವ್ಯಾಪಾರ, ಉದ್ಯೋಗ ಶುರು ಮಾಡಲು ಬಯಸ್ತಾರೆ. ಅದ್ರಲ್ಲೂ ಅನೇಕ ಮಹಿಳೆಯರು ಮನೆಯಲ್ಲೇ ಕುಳಿತು ಅನೇಕ ವಸ್ತುಗಳನ್ನು ಸಿದ್ಧಪಡಿಸ್ತಾರೆ. ನಿಮ್ಮ ಕೌಶಲ್ಯ ಬಳಸಿ ಮನೆಯಲ್ಲೇ ಕುಳಿತು ಕೈ ತುಂಬ ಹಣ ಗಳಿಸುವ ಉದ್ಯೋಗಗಳು ಸಾಕಷ್ಟಿವೆ.

ಕೆಲ ದಿನಗಳ ಹಿಂದಷ್ಟೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ Mahila E-haat ಶುರು ಮಾಡಿದೆ. ಈ Mahila E-haat ನಲ್ಲಿ ಯಾವುದೇ ಮಹಿಳೆ, ಹೆಸರು ನೋಂದಾಯಿಸಿಕೊಂಡು ಬ್ಯುಸಿನೆಸ್ ಶುರು ಮಾಡಬಹುದು. ಸರ್ಕಾರ ಇದಕ್ಕೆ ಯಾವುದೇ ಹಣ ಪಡೆಯುವುದಿಲ್ಲ.

ಸರ್ಕಾರದ ಜೊತೆ ಕೈ ಜೋಡಿಸಿ ಬ್ಯುಸಿನೆಸ್ ಮಾಡಲು ಬಯಸುವವರು http://mahilaehaat-rmk.gov.in/en/join-us/ ಕ್ಲಿಕ್ ಮಾಡಬೇಕು. ಅದ್ರಲ್ಲಿ ನಿಮ್ಮ ಮಾಹಿತಿ  ಭರ್ತಿ ಮಾಡಬೇಕು. ಇದಕ್ಕೆ ಆಧಾರ್ ನಂಬರ್ ಬೇಕು. ಎಲ್ಲ ದಾಖಲೆ ತುಂಬಾದ ಮೇಲೆ ನಿಮ್ಮ ನೋಂದಣಿ ಪೂರ್ತಿಯಾಗಲಿದೆ.

ನೋಂದಣಿಯಾದ ಮೇಲೆ ಐಡಿ ನಂಬರ್ ಸಿಗಲಿದೆ. ನೀವು ತಯಾರಿಸಿದ ವಸ್ತುವಿನ ಫೋಟೋ ತೆಗೆದು Mahila E-haat ವೆಬ್ ಸೈಟ್ ಗೆ ಗೆ ಹಾಕಬೇಕು. ಅಲ್ಲಿ ವಸ್ತುವಿನ ಮಾಹಿತಿ ಹಾಗೂ ಬೆಲೆಯನ್ನು ನಮೂದಿಸಬೇಕು. ನಿಮ್ಮ ಉತ್ಪನ್ನ ಇಷ್ಟವಾದ್ರೆ ವೆಬ್ ಸೈಟ್ ನಲ್ಲಿರುವ ನಿಮ್ಮ ನಂಬರ್ ಗೆ ಗ್ರಾಹಕರು ಕರೆ ಮಾಡಲಿದ್ದಾರೆ. ನಂತ್ರ ಭಾರತ ಪೋಸ್ಟ್ ಪಾರ್ಸಲ್ ಸೇವೆ ಸಹಾಯದ ಮೂಲಕ ನೀವು ವಸ್ತುವನ್ನು ಮಾರಾಟ ಮಾಡಬಹುದು. ಆನ್ ಲೈನ್ ಪಾವತಿ ಸೌಲಭ್ಯ ಕೂಡ ಇದ್ರಲ್ಲಿದೆ. http://mahilaehaat-rmk.gov.in/en/india-post-parcel/ mahilaehaat-rmk.gov.in/en/india-post-parcel ನಲ್ಲಿ ನೀವು ಒಪ್ಪಂದ ಮಾಡಿಕೊಳ್ಳಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...