alex Certify
ಕನ್ನಡ ದುನಿಯಾ       Mobile App
       

Kannada Duniya

6 ಸಾವಿರ ಕೋಟಿ ರೂ. ಗೆ ಸೇಲಾಯ್ತು ಈ ಕಂಪನಿ..!

divyank-turakhia-sold-medianet-for-chinese-company _2ಇತ್ತೀಚಿನ ದಿನಗಳಲ್ಲಿ ವ್ಯಾಪಾರ ಜಗತ್ತಿನಲ್ಲಿ ಮುಂಬೈನ ತುರಖಿಯಾ ಸೋದರರ ಹೆಸರು ಹೆಚ್ಚಾಗಿ ಕೇಳಿಬರುತ್ತಿದೆ. ಈ ಸಹೋದರರು ತಮ್ಮ ಜಾಹೀರಾತು ಕಂಪನಿಯನ್ನು 6000 ಕೋಟಿ (900 ಮಿಲಿಯನ್ ಡಾಲರ್) ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಇದು ಜಾಹೀರಾತು ಕ್ಷೇತ್ರದ ಇತಿಹಾಸದಲ್ಲೇ ದೊಡ್ಡ ವ್ಯಾಪಾರ ಎಂಬ ಖ್ಯಾತಿಗೆ ಪಾತ್ರವಾಗಿದೆ.

ದಿವ್ಯಾಂಕ್ ತುರಖಿಯಾ ಮತ್ತು ಭಾವಿನ್ ತುರಖಿಯಾ ಸಹೋದರರು ತಮ್ಮ ಕಂಪನಿ ಮೀಡಿಯಾ ಡಾಟ್ ನೆಟ್ ಅನ್ನು ಚೀನಾ ಕಂಪನಿಗೆ ಮಾರಾಟ ಮಾಡಿದ್ದಾರೆ. ಇವರ ಈ ಕಂಪನಿ ಆನ್ ಲೈನ್ ಪೇಮೆಂಟ್ ಸರ್ವೀಸ್, ವಾಯ್ಸ್ ಕಾಲಿಂಗ್, ಇನ್ಸ್ಟಂಟ್ ಮೆಸೇಜಿಂಗ್ ಆಪ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿತ್ತು.

1998 ರಲ್ಲಿ ತುರಖಿಯಾ ಸಹೋದರರು ಕೇವಲ 25,000 ರೂ. ಗಳ ಲೋನ್ ತೆಗೆದುಕೊಂಡು ಈ ಕಂಪನಿಯನ್ನು ಆರಂಭಿಸಿದ್ದರು. ಆಗ ಕಂಪನಿಗೆ ಡೋಮೇನ್ ಎಂದು ಹೆಸರಿಟ್ಟಿದ್ದರು. ಈಗ ಈ ಸಹೋದರರು 11 ಕಂಪನಿಗಳ ಮೂಲಕ 1 ಬಿಲಿಯನ್ ಗೂ ಹೆಚ್ಚಿನ ವಹಿವಾಟು ನಡೆಸುತ್ತಾರೆ. ಇವರ ತಂದೆ ಒಬ್ಬ ಚಾರ್ಟೆಡ್ ಅಕೌಂಟೆಂಟ್ ಮತ್ತು ತಾಯಿ ಸಮಾಜ ಸೇವಕಿಯಾಗಿದ್ದಾರೆ.

Related News

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...