alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರೀ ಏರಿಕೆಯಾಯ್ತು ನೇರ ತೆರಿಗೆ ಸಂಗ್ರಹ

ಮುಂಬೈ: ನೇರ ತೆರಿಗೆ ಸಂಗ್ರಹದಲ್ಲಿ ಶೇ. 15.8 ರಷ್ಟು ಏರಿಕೆಯಾಗಿದ್ದು, 3.86 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್(ಸಿ.ಬಿ.ಡಿ.ಟಿ.) ತಿಳಿಸಿದೆ.

ಬುಧವಾರ ಸಿ.ಬಿ.ಡಿ.ಟಿ. ಸೆಪ್ಟಂಬರ್ ವರೆಗಿನ ನೇರ ತೆರಿಗೆ ಸಂಗ್ರಹಣೆಯ ಡೇಟಾ ಬಿಡುಗಡೆ ಮಾಡಿದ್ದು, ಸರಕು ಮತ್ತು ಸೇವಾ ತೆರಿಗೆ, ಹೊಸ ಪರೋಕ್ಷ ತೆರಿಗೆ ನಡುವೆ ನೇರ ತೆರಿಗೆ ಏರಿಕೆಯಾಗಿರುವುದು ಪ್ರಾಮುಖ್ಯತೆ ಪಡೆದುಕೊಂಡಿದೆ.

ಸೆಪ್ಟಂಬರ್ 2017 ರ ವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹ 3.86 ಲಕ್ಷ ಕೋಟಿ ರೂ. ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಶೇ. 15.8 ರಷ್ಟು ಹೆಚ್ಚಾಗಿದೆ.

ಕಾರ್ಪೊರೇಟ್ ಆದಾಯ ತೆರಿಗೆ(CIT) ಯಲ್ಲಿ ಮುಂಗಡ ತೆರಿಗೆ ಶೇ. 8.1 ರಷ್ಟು, ವೈಯಕ್ತಿಕ ಆದಾಯ ತೆರಿಗೆ(PIT) ಯಲ್ಲಿ ಮುಂಗಡ ತೆರಿಗೆ ಶೇ. 30.1 ರಷ್ಟು ಬೆಳವಣಿಗೆಯಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...