alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: 2027 ರ ವೇಳೆಗೆ ದೇಶದಲ್ಲಿ ಭಾರೀ ಉದ್ಯೋಗ ಸೃಷ್ಟಿ

ಮುಂದಿನ 9 ವರ್ಷಗಳಲ್ಲಿ ಅಂದರೆ 2027 ರ ವೇಳೆಗೆ ಭಾರತದಲ್ಲಿ 14 ಲಕ್ಷಕ್ಕೂ ಹೆಚ್ಚು ಹೊಸ ಐಟಿ ಉದ್ಯೋಗಗಳು ಸೃಷ್ಟಿಯಾಗಲಿವೆ. ಈ ಉದ್ಯೋಗಗಳು ಮುಖ್ಯವಾಗಿ ಡಿಜಿಟಲ್ ರೂಪಾಂತರದ ಕೌಶಲ್ಯಗಳಾದ ಸೈಬರ್ ಭದ್ರತೆ, ಇಂಟರ್ನೆಟ್ ಆಪ್ ಥಿಂಗ್ಸ್ (ಐಒಟಿ) ಹಾಗೂ ಬಿಗ್ ಡಾಟಾ ಕ್ಷೇತ್ರಗಳಲ್ಲಿ ಇರಲಿವೆ. ಐಟಿ ಸಂಸ್ಥೆಗಳು ಈ ಕೌಶಲ್ಯವನ್ನು ಬಯಸುತ್ತಿವೆ.

ಇದೇ ವೇಳೆ ಜಾಗತಿಕವಾಗಿ 2027 ರ ವೇಳೆಗೆ 50 ಲಕ್ಷ ಉದ್ಯೋಗಗಳು ಸೇರ್ಪಡೆಗೊಳ್ಳಲಿವೆ. ಇದು ಸಿಸ್ಕೋ ಹಾಗೂ ಇಂಟರ್‌ನ್ಯಾಶನಲ್ ಡಾಟಾ ಕಾರ್ಪೊರೇಶನ್ (ಐಡಿಸಿ) ಜಂಟಿಯಾಗಿ ನಡೆಸಿರುವ ಅಧ್ಯಯನದಲ್ಲಿ ಬೆಳಕಿಗೆ ಬಂದ ಸಂಗತಿಗಳಾಗಿವೆ.

ಸಾಮಾಜಿಕ ಮಾಧ್ಯಮ ಆಡಳಿತಗಾರ, ಮೆಶಿನ್ ಲರ್ನಿಂಗ್ ಡಿಸೈನರ್ ಹಾಗೂ ಐಒಟಿ ಡಿಸೈನರ್‌ ನಂತಹ 20 ಅತ್ಯಂತ ಪ್ರಾಮುಖ್ಯತೆಯ ಐಟಿ ಪಾತ್ರಗಳು ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ ಬೇಡಿಕೆ ಹೆಚ್ಚಲಿದೆ. 2017 ರಲ್ಲಿ 91 ಲಕ್ಷ ಐಟಿ ಹುದ್ದೆಗಳಿದ್ದವು. ಇವುಗಳಲ್ಲಿ 59 ಲಕ್ಷ ಹುದ್ದೆಗಳು ಹೊಸ ಯುಗದ ಪಾತ್ರಗಳ ಹುದ್ದೆಗಳಾಗಿದ್ದವು ಎಂದು ಸಮೀಕ್ಷೆ ಹೇಳಿದೆ.

ಐಟಿ ಕ್ಷೇತ್ರದಲ್ಲಿರುವ ಉದ್ಯೋಗಿಗಳು ತಮ್ಮ ಕೌಶಲ್ಯವನ್ನು ವರ್ಧಿಸಿಕೊಳ್ಳುವುದು ಅನಿವಾರ್ಯವಾಗಿದೆ. ಕಾರಣ, ತಂತ್ರಜ್ಞಾನವು ಹೊಸ ಯುಗದತ್ತ ರೂಪಾಂತರಗೊಳ್ಳುತ್ತಿದೆ. ಈಗಾಗಲೇ ಹಲವರು ತರಬೇತಿ ಪಡೆದುಕೊಳ್ಳಲಾರಂಭಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...