alex Certify
ಕನ್ನಡ ದುನಿಯಾ       Mobile App
       

Kannada Duniya

ಆನ್ ಲೈನ್ ಮೂಲಕ ಲಭ್ಯವಾಗಲಿದೆ ಡೀಸೆಲ್

ಭಾರತದಲ್ಲಿ ಆನ್ ಲೈನ್ ಮತ್ತು ಇ-ಕಾಮರ್ಸ್ ಉದ್ಯಮಗಳ ಯಶಸ್ಸಿನಿಂದ ಪ್ರೇರಣೆ ಪಡೆದಿರೋ ತೈಲ ಕಂಪನಿಗಳು, ಆನ್ ಲೈನ್ ನಲ್ಲೂ ಡೀಸೆಲ್ ಮಾರಾಟಕ್ಕೆ ಚಿಂತನೆ ನಡೆಸಿವೆ. ಈ ಮೂಲಕ ಗ್ರಾಮೀಣ ಪ್ರದೇಶದ ಗ್ರಾಹಕರಿಗೆ ಅನುಕೂಲ ಮಾಡಿಕೊಡುವುದು ಇಂಡಿಯನ್ ಆಯಿಲ್, HPCL ಮತ್ತು BPCL ಕಂಪನಿಗಳ ಲೆಕ್ಕಾಚಾರ.

ಆನ್ ಲೈನ್ ನಲ್ಲಿ ಡೀಸೆಲ್ ಮಾರಾಟ ಆರಂಭಿಸಲು ಪೆಟ್ರೋಲಿಯಂ ಮತ್ತು ಸ್ಫೋಟಕ ಸುರಕ್ಷತಾ ಸಂಸ್ಥೆಯಿಂದ ಅನುಮತಿಗಾಗಿ ಕಾಯುತ್ತಿವೆ. ಡೀಸೆಲ್ ಡೆಲಿವರಿಗೆ ಹೊಸ ಬಗೆಯ ಟ್ಯಾಂಕರ್ ಗಳ ಅಗತ್ಯವೂ ಇದೆ. ಸುರಕ್ಷಿತ ಎನಿಸಿದ ಪ್ರದೇಶಗಳಿಗೆ ಮಾತ್ರ ಡೀಸೆಲ್ ಡೆಲಿವರಿ ಮಾಡಲಾಗುತ್ತದೆ.

ಇಕ್ಕಟ್ಟಾದ, ಜನರಿಂದ ಕಿಕ್ಕಿರಿದ ಮತ್ತು ಜನವಸತಿ ಹೆಚ್ಚಾಗಿರುವ ಪ್ರದೇಶದಲ್ಲಿ ಡೀಸೆಲ್ ಹೋಮ್ ಡೆಲಿವರಿ ನಿರ್ಬಂಧಿಸಲಾಗುತ್ತದೆ. ಮುಂದಿನ ತಿಂಗಳು ತೈಲ ಕಂಪನಿಗಳಿಗೆ PESOನಿಂದ ಅನುಮತಿ ದೊರೆಯುವ ನಿರೀಕ್ಷೆ ಇದೆ. ಹಾಗಾಗಿ ಡಿಸೆಂಬರ್ ಅಂತ್ಯದ ವೇಳೆಗೆ ಡೀಸೆಲ್ ಹೋಮ್ ಡೆಲಿವರಿ ಪ್ರಾರಂಭಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...