alex Certify
ಕನ್ನಡ ದುನಿಯಾ       Mobile App
       

Kannada Duniya

ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್! ಗಗನಕ್ಕೇರಿದ ತೈಲ ಬೆಲೆ

ನವದೆಹಲಿ: ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಅದೇ ರೀತಿ ದೇಶೀಯವಾಗಿ ಡೀಸೆಲ್ ಹಾಗೂ ಪೆಟ್ರೋಲ್ ಬೆಲೆ ಏರಿಕೆಯಾಗಿದೆ.

ದೆಹಲಿಯಲ್ಲಿ ಡೀಸೆಲ್ ಪ್ರತಿ ಲೀಟರ್ ಗೆ 61.74 ರೂ., ಪೆಟ್ರೋಲ್ ಪ್ರತಿ ಲೀಟರ್ ಗೆ 71.18 ರೂ. ತಲುಪಿದೆ. ದೆಹಲಿಯಲ್ಲಿ ಡೀಸೆಲ್ ಬೆಲೆ ಇತ್ತೀಚಿನ ದಿನಗಳಲ್ಲಿಯೇ ಅತಿ ಹೆಚ್ಚಿನ ಮೊತ್ತಕ್ಕೇರಿದೆ.

ದೆಹಲಿಯಲ್ಲಿ ಡೀಸೆಲ್ ಲೀಟರ್ ಗೆ 61.74 ರೂ., ಮುಂಬೈನಲ್ಲಿ 65.74 ರೂ. ಆಗಿದೆ. ಸ್ಥಳೀಯ ತೆರಿಗೆಗಳು ಸೇರಿ ಆಯಾ ಪ್ರದೇಶಗಳಲ್ಲಿನ ತೈಲ ಬೆಲೆ ನಿರ್ಧರಿತವಾಗುತ್ತದೆ.

2017 ರ ಡಿಸೆಂಬರ್ 12 ರಿಂದ ತೈಲ ಬೆಲೆಯಲ್ಲಿ ಏರಿಕೆಯಾಗ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿರುವುದರಿಂದ ಈ ಅವಧಿಯಲ್ಲಿ ದೆಹಲಿಯಲ್ಲಿ ಡೀಸೆಲ್ ಬೆಲೆ ಲೀಟರ್ ಗೆ 3.4 ರೂ., ಪೆಟ್ರೋಲ್ ಲೀಟರ್ ಗೆ 2.09 ರೂ. ಏರಿಕೆಯಾಗಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಬೆಲೆ 71.18 ರೂ.ಗೆ ಏರಿಕೆಯಾಗಿದ್ದು, 2014 ರ ಆಗಸ್ಟ್ ಬಳಿಕ ಗರಿಷ್ಠ ಮಟ್ಟವಾಗಿದೆ ಎಂದು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ದಿನ ನಿತ್ಯದ ಇಂಧನ ಬೆಲೆ ಪಟ್ಟಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...