alex Certify
ಕನ್ನಡ ದುನಿಯಾ       Mobile App
       

Kannada Duniya

ದಿನೇ ದಿನೇ ಹೆಚ್ಚಾಗ್ತಿರೋ ತೈಲ ಬೆಲೆಯಿಂದ ಹೈರಾಣಾಗುತ್ತಿದ್ದಾನೆ ‘ಶ್ರೀಸಾಮಾನ್ಯ’

ಸತತ ನಾಲ್ಕು ದಿನಗಳಿಂದ ದೇಶದಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಏರಿಕೆ ಆಗುತ್ತಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಾದ ಏರಿಕೆಯಿಂದ, ತೈಲ ಬೆಲೆ ಏರುತ್ತಿದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆಯಲ್ಲದೇ ದಿನನಿತ್ಯ ವಸ್ತುಗಳ ಬೆಲೆ ಮೇಲೂ ಇದು ಪರಿಣಾಮ ಬೀರುತ್ತಿದ್ದು, ಶ್ರೀಸಾಮಾನ್ಯನ ಬದುಕು ಸಂಕಷ್ಟಕ್ಕೆ ಸಿಲುಕುವಂತಾಗಿದೆ.

ದೇಶದ ನಾಲ್ಕು ಮೆಟ್ರೋಪಾಲಿಟಿನ್ ಸಿಟಿಗಳಲ್ಲಿ ತೈಲ ಬೆಲೆ ಗಗನಕ್ಕೆ ಮುಟ್ಟಿದೆ. ಸದ್ಯ ದೆಹಲಿಯಲ್ಲಿ ಡಿಸೇಲ್ 69.75, ಮುಂಬೈನಲ್ಲಿ 74.05, ಕೋಲ್ಕತಾದಲ್ಲಿ 72.60 ಹಾಗೂ ಚೆನ್ನೈನಲ್ಲಿ 73.69 ರೂಪಾಯಿ ತಲುಪಿದೆ. ಡಿಸೇಲ್ ನಂತೆ ಪೆಟ್ರೋಲ್ ದರದಲ್ಲೂ ಗಣನೀಯ ಏರಿಕೆ ಕಂಡು ಬಂದಿದೆ. ಅದ್ರಂತೆ ದೆಹಲಿಯಲ್ಲಿ ಪೆಟ್ರೋಲ್ 78.18 ರೂ. ಆದ್ರೆ, ಮುಂಬೈನಲ್ಲಿ 85.60, ಕೋಲ್ಕತಾದಲ್ಲಿ 81.11 ಮತ್ತು ಚೆನ್ನೈನಲ್ಲಿ 81.22 ರೂಪಾಯಿ ತಲುಪಿದೆ. ತೈಲ ಬೆಲೆ ಏರಿಕೆಯಿಂದ ದೈನಂದಿನ ಜೀವನದ ಮೇಲೆ ನೇರ ಪರಿಣಾಮ ಬೀಳುತ್ತಿದೆ.

ವಾಹನ ಸವಾರರು ಮೊದಲು 100 ರೂಪಾಯಿ ಪೆಟ್ರೋಲ್ ಹಾಕಿಸಿಕೊಂಡು ಕಚೇರಿ ತಲುಪುತ್ತಿದ್ದರೆ, ಈಗ ಕಚೇರಿ ಮುಟ್ಟಲು 200 ರೂಪಾಯಿ ಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತೈಲ ಬೆಲೆಯ ಏರಿಕೆ, ಮಧ್ಯಮ ಕುಟುಂಬಗಳ ಮೇಲೆ ಪರಿಣಾಮ ಬೀರುತ್ತಿದೆ. ಸವಾರರು ಪೆಟ್ರೋಲ್ ಗೆ ಹೆಚ್ಚು ಹಣವನ್ನು ವ್ಯಯ ಮಾಡುವಂತಾಗಿದೆ. ಅಲ್ಲದೆ ತೈಲ ಬೆಲೆ ಏರಿದ್ರೆ, ನಮ್ಮ ಸಂಬಳ ಹೆಚ್ಚಾಗುವುದಿಲ್ಲ. ಅಷ್ಟೇ ಸಂಬಳದಲ್ಲಿ ಜೀವನ ನಡೆಸುವುದು ಕಷ್ಟ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...