alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಬಲ ಬೆಲೆಯ ಲಾಭ ದುಬಾರಿ ಡೀಸೆಲ್‌ನಲ್ಲಿ ಕೊಚ್ಚಿ ಹೋಯ್ತು…!

ರಾಜಧಾನಿ ದೆಹಲಿಯಲ್ಲಿ ವರ್ಷದ ಹಿಂದೆ 57.46 ರೂ. ಇದ್ದ ಡೀಸೆಲ್ ಬೆಲೆ ಈಗ 71.34 ರೂ.ಗೆ ತಲುಪಿದೆ. ಅಂದರೆ ಪ್ರತಿ ಲೀಟರ್‌ಗೆ ಒಂದು ವರ್ಷದಲ್ಲಿ 13.88 ರೂ.ನಷ್ಟು ಅಥವಾ ಶೇ.24.2 ರಷ್ಟು ಏರಿಕೆಯಾಗಿದೆ. ಇದೇ ಅವಧಿಯಲ್ಲಿ ರಸಗೊಬ್ಬರ ಹಾಗೂ ಬೆಳೆ ರಕ್ಷಣೆಯ ರಾಸಾಯನಿಕಗಳ ಬೆಲೆಯೂ ಅದೇ ರೀತಿ ಏರಿದೆ. ಹೀಗಾಗಿ ಮೋದಿ ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆಯ ಏರಿಕೆಯಿಂದ ರೈತರಿಗೆ ಬಂದ ಲಾಭವೆಲ್ಲಾ ಈ ಬೆಲೆ ಏರಿಕೆಯ ಮೂಲಕ ಕೊಚ್ಚಿ ಹೋದಂತಾಗಿದೆ.

ಡೀಸೆಲ್ ಅನ್ನು ಕೃಷಿಯಲ್ಲಿ ಟ್ರಾಕ್ಟರ್‌ಗಳು, ಕೊಯ್ಲು ಯಂತ್ರ ಹಾಗೂ ನೀರಾವರಿ ಪಂಪ್‌ಗಳ ಇಂಧನವಾಗಿ ಉಪಯೋಗಿಸಲಾಗುತ್ತದೆ. ಲುಧಿಯಾನದಲ್ಲಿರುವ ಪಂಜಾಬ್ ಕೃಷಿ ವಿವಿಯ ಲೆಕ್ಕಾಚಾರದ ಪ್ರಕಾರ, ಪ್ರತಿ ಎಕರೆ ಭತ್ತ ಅಥವಾ ಗೋಧಿ ಬೆಳೆಗೆ ಪ್ರತಿ ಎಕರೆಗೆ ಸರಾಸರಿ ಏಳು ಗಂಟೆಗಳ ಕಾಲ ಟ್ರಾಕ್ಟರ್ ಓಡಿಸಲಾಗುತ್ತದೆ.

“50 ಎಚ್‌ಪಿಯ ಟ್ರಾಕ್ಟರ್ ಅನ್ನು ಕೃಷಿಯಲ್ಲಿ ಉಪಯೋಗಿಸುವಾಗ ಪ್ರತಿ ಗಂಟೆಗೆ 6 ಲೀ. ಡೀಸೆಲ್ ಬಳಸುತ್ತದೆ” ಎಂದು ರೈತರೊಬ್ಬರು ತಮ್ಮ ಖರ್ಚಿನ ಕಥೆಯನ್ನು ವಿವರಿಸುವ ಮೂಲಕ ಡೀಸೆಲ್ ಬೆಲೆ ಏರಿಕೆಯಾದರೆ ವಾಹನ ಸವಾರರಿಗಷ್ಟೇ ಬಿಸಿ ತಟ್ಟುವುದಲ್ಲ ಎಂದು ನೆನಪಿಸುತ್ತಾರೆ.

2016ರಲ್ಲಿ ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಎಕಾನಮಿಕ್ ಗ್ರೋತ್ ನಡೆಸಿದ ಅಧ್ಯಯನದ ಪ್ರಕಾರ, ದೇಶದ ಶೇ.30 ರಷ್ಟು ಕೃಷಿಗೆ ಡೀಸೆಲ್ ಪಂಪ್‌ಗಳಿಂದ ನೀರಾವರಿ ಮಾಡಲಾಗುತ್ತದೆ. ಈ ಅನುಪಾತ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ (ಶೇ.1.8) ಇದ್ದರೆ, ಬಿಹಾರದಲ್ಲಿ ಅತಿ ಗರಿಷ್ಠ (ಶೇ.88.7) ಇತ್ತು.

ಪ್ರತಿ ಲೀಟರ್ ಡೀಸೆಲ್ ಬೆಲೆ 14 ರೂ. ಏರಿಕೆಯಾದರೆ, ಪ್ರತಿ ಎಕರೆ ಕೃಷಿಯ ವೆಚ್ಚ 1,400 ರೂ. ತನಕ ಏರಿಕೆಯಾಗುತ್ತದೆ. ಪ್ರತಿ ಎಕರೆಗೆ ಸರಾಸರಿ 30 ಕ್ವಿಂಟಲ್ ಭತ್ತ ಬೆಳೆದರೆ, ಡೀಸೆಲ್ ಬೆಲೆ ಏರಿಕೆಯಿಂದ ಕ್ವಿಂಟಲ್‌ಗೆ 60 ರೂ. ಖರ್ಚು ಹೆಚ್ಚಾದಂತಾಯಿತು. ಭತ್ತದ ಬೆಂಬಲ ಬೆಲೆ ಏರಿದ್ದು, ಕೇವಲ 200 ರೂ. ಅಂದರೆ ಬೆಂಬಲ ಬೆಲೆಯ ನಾಲ್ಕನೇ ಒಂದರಷ್ಟು ಭಾಗವನ್ನು ರೈತ ದುಬಾರಿ ಡೀಸೆಲ್‌ಗಾಗಿ ಹೆಚ್ಚುವರಿ ಕೊಡಬೇಕಾಗಿ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...