alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳ್ಳಿ, ಬಂಗಾರದ ನಾಣ್ಯದ ಮೇಲೆ ಗಣೇಶ, ಲಕ್ಷ್ಮಿ ಬದಲು ಮೋದಿ ಚಿತ್ರ

ಧನ್ ತೇರಸ್ ದಿನ ಬಂಗಾರ, ಬೆಳ್ಳಿ ಖರೀದಿ ಮಾಡುವುದು ಸಂಪ್ರದಾಯ. ಕೆಲವರು ಬಂಗಾರ, ಬೆಳ್ಳಿ ಆಭರಣ ಖರೀದಿ ಮಾಡಿದ್ರೆ ಮತ್ತೆ ಕೆಲವರು ನಾಣ್ಯ ಅಥವಾ ಬಿಸ್ಕಿಟ್ ಖರೀದಿ ಮಾಡ್ತಾರೆ. ಬಂಗಾರದಂಗಡಿ ಮಾಲೀಕರು ಗ್ರಾಹಕರನ್ನು ಸೆಳೆಯಲು ಹೊಸ ಬಗೆಯ ನಾಣ್ಯ, ಆಭರಣಗಳನ್ನು ತಯಾರಿಸುವುದು ಮಾಮೂಲಿ.

ಈ ಬಾರಿ ಸೂರತ್ ನಲ್ಲಿ ವಿಶೇಷ ನಾಣ್ಯವೊಂದು ಗಮನ ಸೆಳೆಯುತ್ತಿದೆ. ದೇವಿ ಲಕ್ಷ್ಮಿ ಹಾಗೂ ಗಣೇಶನ ಬದಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಚಿತ್ರ, ನಾಣ್ಯದ ಮೇಲೆ ಮೂಡಿದೆ. ಮೋದಿ ನಾಣ್ಯಕ್ಕೆ ಬೇಡಿಕೆ ಚೆನ್ನಾಗಿದೆಯಂತೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಾಣ್ಯಗಳು ಕೂಡ ಅಂಗಡಿಯಲ್ಲಿವೆ.

ಮೋದಿ ದೇಶಕ್ಕೆ ಒಳ್ಳೆಯದನ್ನು ಮಾಡಿದ್ದಾರೆ. ಅವ್ರು ಒಂದು ರೀತಿಯಲ್ಲಿ ದೇವರು. ಹಾಗಾಗಿ ಅವ್ರ ನಾಣ್ಯಕ್ಕೆ ಈ ಬಾರಿ ಪೂಜೆ ಮಾಡ್ತೇವೆಂದು ಅಭಿಮಾನಿಗಳು ಹೇಳಿದ್ದಾರೆ. ಅಂಗಡಿಯಲ್ಲಿ ಮೋದಿ ಚಿತ್ರದ ಬೆಳ್ಳಿ, ಬಂಗಾರದ ನಾಣ್ಯ ಹಾಗೂ ಬಿಸ್ಕಿಟ್ ಇದೆ. 10 ಗ್ರಾಂನಿಂದ ಒಂದು ಕೆ.ಜಿ. ತೂಕದವರೆಗೆ ಬೇರೆ ಬೇರೆ ಗಾತ್ರದ ನಾಣ್ಯಗಳು ಗ್ರಾಹಕರನ್ನು ಸೆಳೆಯುತ್ತಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...