alex Certify
ಕನ್ನಡ ದುನಿಯಾ       Mobile App
       

Kannada Duniya

ನಕಲಿ ಕಂಪನಿಗಳಿಂದ ಜಮಾ ಆದ ಮೊತ್ತವೆಷ್ಟು ಗೊತ್ತಾ..?

ನವದೆಹಲಿ: ಬ್ಲಾಕ್ ಮನಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ 8 ರಂದು ನೋಟ್ ಬ್ಯಾನ್ ಮಾಡಿದ ಬಳಿಕ ಅನೇಕ ಬೆಳವಣಿಗೆ ನಡೆದಿವೆ.

ನಕಲಿ ಕಂಪನಿಗಳಿಂದ ಬರೋಬ್ಬರಿ 17,000 ಕೋಟಿ ರೂ. ನಗದು ಜಮೆ ಆಗಿದೆ. ಒಂದೇ ಒಂದು ನಕಲಿ ಕಂಪನಿಯ ಹೆಸರಲ್ಲಿ 2134 ಬ್ಯಾಂಕ್ ಖಾತೆಗಳಿರುವುದು ಬೆಳಕಿಗೆ ಬಂದಿದ್ದು, ಈ ಖಾತೆಗಳಲ್ಲಿ 2484 ಕೋಟಿ ರೂ. ಜಮಾ ಮಾಡಲಾಗಿದೆ.

ನೋಟ್ ಬ್ಯಾನ್ ಬಳಿಕ 58,000 ಖಾತೆಗಳನ್ನು ಒಳಗೊಂಡಿರುವ ಸುಮಾರು 35,000 ಕಂಪನಿಗಳಿಗೆ ಸಂಬಂಧಿಸಿದ ಖಾತೆಗಳ ಮಾಹಿತಿಯನ್ನು 58 ಬ್ಯಾಂಕ್ ಗಳಿಂದ ಸ್ವೀಕರಿಸಲಾಗಿದ್ದು, ಪ್ರಾಥಮಿಕ ತನಿಖೆಯಲ್ಲಿ 17,000 ಕೋಟಿ ರೂ. ನಗದು ಜಮಾ ಮಾಡಲಾಗಿದೆ.

ಕೇಂದ್ರ ಸರ್ಕಾರದಿಂದ ಈ ಕುರಿತು ಮಾಹಿತಿ ನೀಡಲಾಗಿದ್ದು, ಅಕ್ರಮ ಹಣದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ 2.24 ಲಕ್ಷ ನಕಲಿ ಕಂಪನಿಗಳು ಕಂಡು ಬಂದಿವೆ. 3.09 ಲಕ್ಷ ನಕಲಿ ಕಂಪನಿಗಳ ನಿರ್ದೇಶಕರು ಅನರ್ಹಗೊಂಡಿದ್ದಾರೆ.

ನಕಲಿ ನಿರ್ದೇಶಕರಿಗೆ ಕಡಿವಾಣ ಹಾಕಲು ನೇಮಕದ ಸಂದರ್ಭದಲ್ಲಿ ಪಾನ್ ಮತ್ತು ಆಧಾರ್ ಸಂಖ್ಯೆಯನ್ನು ನೀಡುವ ವ್ಯವಸ್ಥೆಯನ್ನು ಕಾರ್ಯರೂಪಕ್ಕೆ ತರಲಾಗುತ್ತದೆ. ಬ್ಯಾಂಕ್ ಖಾತೆಯಲ್ಲಿ ಹಣ ವರ್ಗಾವಣೆ ಬಗ್ಗೆ ನಿಗಾ ವಹಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...