alex Certify
ಕನ್ನಡ ದುನಿಯಾ       Mobile App
       

Kannada Duniya

ಜನ್ ಧನ್ ಖಾತೆದಾರರಿಗೆ ಇಲ್ಲಿದೆ ಒಂದು ಮಾಹಿತಿ

ನವದೆಹಲಿ: ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿರುವ ಹೆಚ್ಚಿನ ಜನರನ್ನು ಖಾತೆದಾರರನ್ನಾಗಿ ಮಾಡುವ ಉದ್ದೇಶದಿಂದ ರೂಪಿಸಿದ್ದ ಜನ್ ಧನ್ ಯೋಜನೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಜನ್ ಧನ್ ಖಾತೆಗಳಲ್ಲಿ ಠೇವಣಿ ಮೊತ್ತ ಮಾರ್ಚ್ 31 ರ ವೇಳೆಗೆ 80,545 ಕೋಟಿ ರೂ. ದಾಟಿದೆ. 2016 ರ ನವೆಂಬರ್ ನಲ್ಲಿ ಜನ್ ಧನ್ ಖಾತೆ ಗಳಲ್ಲಿ 45,300 ಕೋಟಿ ರೂ. ಠೇವಣಿ ಸಂಗ್ರಹವಾಗಿತ್ತು. ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಸಂದರ್ಭದಲ್ಲಿ ಜನ್ ಧನ್ ಖಾತೆಗಳಿಗೆ ಹೆಚ್ಚಿನ ಮೊತ್ತ ಜಮೆ ಆಗಿದ್ದರಿಂದ 74,000 ಕೋಟಿ ರೂ. ಗೆ ಏರಿತ್ತು.

ನಂತರದಲ್ಲಿ ಠೇವಣಿ ಹಣ ಕಡಿಮೆಯಾಗಿ 2017 ರ ಮಾರ್ಚ್ ಬಳಿಕ ಸ್ಥಿರತೆ ಕಾಯ್ದುಕೊಂಡಿದೆ ಎಂದು ಹೇಳಲಾಗಿದೆ.

ಕಳೆದ ವಾರ ವಿಶ್ವ ಬ್ಯಾಂಕ್ ಬಿಡುಗಡೆ ಮಾಡಿದ್ದ ವರದಿಯಲ್ಲಿ ಜನ್ ಧನ್ ಖಾತೆಯ ಯಶಸ್ಸಿನ ಬಗ್ಗೆ ಪ್ರಶಂಸೆ ವ್ಯಕ್ತವಾಗಿತ್ತು. ಜನ್ ಧನ್ ಖಾತೆಯಲ್ಲಿ ಠೇವಣಿ 80,545 ಕೋಟಿ ರೂ. ದಾಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...