alex Certify
ಕನ್ನಡ ದುನಿಯಾ       Mobile App
       

Kannada Duniya

ಸಾವಿರ ರೂ. ಬ್ಯಾಂಕ್ ನಲ್ಲಿ ಜಮಾ ಮಾಡಿ ದೊಡ್ಡ ‘ಲಾಭ’ ಪಡೆಯಿರಿ

ಈ ಯೋಜನೆ ಬಗ್ಗೆ ಕೇಳಿದ್ರೆ ನಿಮಗೂ ಆಶ್ಚರ್ಯವಾಗದೆ ಇರದು. ಬ್ಯಾಂಕ್ ನಲ್ಲಿ ಕೇವಲ ಸಾವಿರ ರೂಪಾಯಿ ಜಮಾ ಮಾಡಿ ಎರಡು ದೊಡ್ಡ ಪ್ರಯೋಜನಗಳನ್ನು ಪಡೆಯಬಹುದು.

ಕೇವಲ ಸಾವಿರ ರೂಪಾಯಿಯನ್ನು ಬ್ಯಾಂಕ್ ಖಾತೆಯಲ್ಲಿ ಜಮಾ ಮಾಡಿ ನಿಮ್ಮ ಮಗಳ ಭವಿಷ್ಯವನ್ನು ಸುರಕ್ಷಿತಗೊಳಿಸಬಹುದು. ಆಕೆ ಮದುವೆ ಖರ್ಚಿನ ಚಿಂತೆ ಬಿಟ್ಟು ಆರಾಮಾಗಿರಬಹುದು. ಸುಕನ್ಯಾ ಸಮೃದ್ಧಿ ಯೋಜನೆಯಡಿ ಹಣವಿಟ್ಟು ನಿಮ್ಮ ಮಗಳ ಭವಿಷ್ಯವನ್ನು ಭದ್ರಪಡಿಸಬಹುದಾಗಿದೆ.

ಯಾವುದೇ ಅಂಚೆ ಕಚೇರಿಯಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಯನ್ನು ನೀವು ತೆರೆಯಬಹುದಾಗಿದೆ. ಪಿಪಿಎಫ್ ಖಾತೆ ತೆರೆಯುವ ಸೌಲಭ್ಯವಿರುವ ಎಲ್ಲ ಬ್ಯಾಂಕ್ ಗಳಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಸೌಲಭ್ಯವಿರುತ್ತದೆ. ಖಾತೆ ತೆರೆಯುವ ಫಾರ್ಮ್, ಮಗುವಿನ ಜನನ ದಾಖಲೆ, ಪೋಷಕರ ಗುರುತಿನ ಚೀಟಿ (ಪಾನ್ ಕಾರ್ಡ್, ರೇಷನ್ ಕಾರ್ಡ್ ಅಥವಾ ಡ್ರೈವಿಂಗ್ ಲೈಸೆನ್ಸ್, ಪಾಸ್ಪೋರ್ಟ್ )ಯನ್ನು ನೀಡಬೇಕಾಗುತ್ತದೆ.

ಹಣ ಜಮಾ ಮಾಡಲು ನೀವು ನೆಟ್ ಬ್ಯಾಂಕಿಂಗ್ ಸೌಲಭ್ಯವನ್ನು ಬಳಸಬಹುದಾಗಿದೆ. ಒಂದು ವೇಳೆ ಮಗು ಮಧ್ಯದಲ್ಲಿಯೇ ಸಾವನ್ನಪ್ಪಿದ್ರೆ ಮೃತರ ಸಂಬಂಧಿಕರು ಮರಣ ದಾಖಲೆಯನ್ನು ಅಂಚೆ ಕಚೇರಿಗೆ ನೀಡಬೇಕಾಗುತ್ತದೆ. ಆಗ ಖಾತೆ ಬಂದ್ ಆಗುವ ಜೊತೆಗೆ ಜಮೆಯಾದ ಹಣ ಹಾಗೂ ಬಡ್ಡಿ ಸಂಬಂಧಿಕರಿಗೆ ಸಿಗಲಿದೆ.

ಮಗಳಿಗೆ 18 ವರ್ಷವಾಗ್ತಿದ್ದಂತೆ ಶೇಕಡಾ 50ರಷ್ಟು ಹಣವನ್ನು ಶಿಕ್ಷಣಕ್ಕಾಗಿ ತೆಗೆಯಲು ಅವಕಾಶವಿದೆ. ಖಾತೆ ತೆರೆದ 21 ವರ್ಷಗಳ ನಂತ್ರ ಖಾತೆ ಬಂದ್ ಆಗಲಿದೆ. ಇದಕ್ಕಿಂತ ಮೊದಲು ಹುಡುಗಿಗೆ ಮದುವೆಯಾದಲ್ಲಿ ಮೊದಲೇ ಖಾತೆ ಬಂದ್ ಆಗಲಿದೆ. ಖಾತೆ ತೆರೆದು 21 ವರ್ಷವಾದ್ರೂ ಮದುವೆಯಾಗದೆ ಹೋದಲ್ಲಿ ಖಾತೆಯನ್ನು ಮುಂದುವರೆಸುವ ವ್ಯವಸ್ಥೆ ಕೂಡ ಇದೆ.

ಡಿಸೆಂಬರ್ 4,2014 ರಂದು ನರೇಂದ್ರ ಮೋದಿ ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ ಸುಕನ್ಯಾ ಸಮೃದ್ಧಿ ಯೋಜನೆ ಶುರುಮಾಡಿದ್ದಾರೆ. ಅನೇಕರಿಗೆ ಈ ಯೋಜನೆ ಬಗ್ಗೆ ಇನ್ನೂ ಮಾಹಿತಿಯಿಲ್ಲ. ಹೆಣ್ಣು ಮಕ್ಕಳ ಪಾಲಕರು ಸುಲಭವಾಗಿ ಈ ಖಾತೆ ತೆಗೆಯಬಹುದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...