alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಸಿಮ್ ಖರೀದಿಸುವ ಮುನ್ನ ತಿಳಿದಿರಲಿ ಈ ವಿಷ್ಯ

ಮೊಬೈಲ್ ಫೋನ್ ಸಿಮ್ ಖರೀದಿಸುವವರಿಗೆ ಸದ್ಯಕ್ಕಂತೂ ನಿರಾಳ. ಯಾಕೆಂದರೆ ಸಿಮ್ ಖರೀದಿಗೆ ಆಧಾರ್ ಆಧಾರಿತ ಫೇಸ್ ಐಡೆಂಟಿಫಿಕೇಷನ್ ನೀಡುವಂತಹ ಪ್ರಸ್ತಾಪವನ್ನು ಸದ್ಯ ಬಾಕಿ ಉಳಿಸಿಕೊಳ್ಳಲಾಗಿದೆ.

ಹೊಸ ಸಿಮ್ ನೀಡಿಕೆ ಹಾಗೂ ಸಿಮ್‍ಗಳ ಮರು ಪರಿಶೀಲನೆಯನ್ನು ಆಧಾರ್ ಗುರುತಿನ ಮೂಲಕವೇ ಮಾಡುವ ಸಂಬಂಧದ ದೂರಿನ ಕುರಿತ ಅರ್ಜಿಯ ತೀರ್ಪನ್ನು ಸುಪ್ರೀಂಕೋರ್ಟ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ದೂರಸಂಪರ್ಕ ಇಲಾಖೆ ಈ ನಿಲುವು ತಳೆದಿದೆ.

ಆಧಾರ್ ಆಧಾರಿತ ಇ-ಕೆವೈಸಿ ಪ್ರಕ್ರಿಯೆ ಸಂಬಂಧ ನ್ಯಾಯಾಲಯದಲ್ಲಿರುವ ಪ್ರಕರಣದ ಕುರಿತ ತೀರ್ಪು ಈ ತಿಂಗಳ ಅಂತ್ಯದಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಅಲ್ಲದೆ ಹೊಸ ಮೊಬೈಲ್ ಸಂಪರ್ಕಗಳಿಗೆ ಸಂಬಂಧಿತ ಕೆವೈಸಿ ವಿಧಾನವನ್ನೂ ಮರು ಪರಿಶೀಲಿಸಬೇಕಾಗಲೂಬಹುದು ಎಂದು ದೂರಸಂಪರ್ಕ ಇಲಾಖೆಯು ಆಧಾರ್ ಪ್ರಾಧಿಕಾರದ ಸಿಇಒಗೆ ಸೆ. 19 ರಂದು ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...