alex Certify
ಕನ್ನಡ ದುನಿಯಾ       Mobile App
       

Kannada Duniya

ಡಿಸೆಂಬರ್ 30 ರ ನಂತ್ರ ಕರುಣೆ ತೋರಿಸುತ್ತಾ ಕೇಂದ್ರ?

bank_rd4qo1r

ನೋಟು ನಿಷೇಧವಾಗಿ ಇಂದಿಗೆ 38 ದಿನ ಕಳೆದಿದೆ. ಈವರೆಗೂ ಬ್ಯಾಂಕ್ ಹಾಗೂ ಎಟಿಎಂ ಮುಂದೆ ಜನರ ಸಂಖ್ಯೆ ಮಾತ್ರ ಕಡಿಮೆಯಾಗಿಲ್ಲ. ಡಿಸೆಂಬರ್ 30ರವರೆಗೆ ಬ್ಯಾಂಕ್ ಹಾಗೂ ಎಟಿಎಂನಿಂದ ಎಷ್ಟು ಮೊತ್ತವನ್ನು ಡ್ರಾ ಮಾಡಬಹುದು ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆದ್ರೆ ಡಿಸೆಂಬರ್ 30 ನಂತ್ರ ಈ ಮಿತಿಯನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ.

ವಾರಕ್ಕೊಮ್ಮೆ ಬ್ಯಾಂಕ್ ನಿಂದ 24 ಸಾವಿರ ರೂಪಾಯಿ ಡ್ರಾ ಮಾಡಬಹುದಾಗಿದೆ. ಎಟಿಎಂನಲ್ಲಿ ದಿನಕ್ಕೆ 2500 ರೂಪಾಯಿ ಪಡೆಯುವ ಅವಕಾಶ ನೀಡಲಾಗಿದೆ. ಆದ್ರೆ ಕಪ್ಪುಹಣದ ಮಾಲೀಕರು ಹಾಗೂ ಬ್ಯಾಂಕ್ ಅಧಿಕಾರಿಗಳ ಗೋಲ್ ಮಾಲ್ ನಿಂದಾಗಿ ಗ್ರಾಹಕರಿಗೆ ವಾರಕ್ಕೆ 24 ಸಾವಿರ ರೂಪಾಯಿ ಸಿಗುವುದೂ ಕಷ್ಟವಾಗಿದೆ.

ಸರ್ಕಾರ ಹೊಸ ನೋಟುಗಳನ್ನು ಬ್ಯಾಂಕ್ ಗಳಿಗೆ ತಲುಪಿಸಲು ಹರಸಾಹಸ ಮಾಡ್ತಿದೆ. ಆದ್ರೆ ಮುದ್ರಣವಾದ ನೋಟುಗಳು ಬ್ಯಾಂಕ್ ಗೆ ಬರುವ ಬದಲು ಕಪ್ಪುಹಣ ಖದೀಮರನ್ನು ತಲುಪುತ್ತಿದೆ. ದಾರಿ ಮಧ್ಯೆಯೇ ಕಪ್ಪುಹಣ ಬಿಳಿಯಾಗ್ತಾ ಇದೆ. ಈಗಾಗಲೇ ಐಟಿ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು 316 ಕೋಟಿ ಹಣವನ್ನು ಜಪ್ತಿ ಮಾಡಿದ್ದಾರೆ. 76 ಕೋಟಿ ಮೌಲ್ಯದ ಬಂಗಾರವನ್ನು ವಶಕ್ಕೆ ಪಡೆಯಲಾಗಿದೆ.

ಕಪ್ಪುಹಣ ಮಾಲೀಕರಿಗೆ ಹಣದ ಜೊತೆ ಬ್ಯಾಂಕ್ ಮುಂದೆ ಬರಲು ಮಾರ್ಚ್ 31ರವರೆಗೆ ಅವಕಾಶ ನೀಡಲಾಗಿದೆ. ಕಪ್ಪುಹಣವಿಟ್ಟು ಶರಣಾದಲ್ಲಿ ಶೇಕಡಾ 50ರಷ್ಟು ತೆರಿಗೆ ಹಾಗೂ ದಂಡ ನೀಡಿ ಕಪ್ಪುಹಣವನ್ನು ಬಿಳಿ ಮಾಡಿಕೊಳ್ಳುವ ಅವಕಾಶವನ್ನು ನೀಡಿದೆ. ಆದ್ರೆ ಮಾಲೀಕರು ಮಾತ್ರ ಸಾರ್ವಜನಿಕರಿಗೆ ದ್ರೋಹ ಮಾಡ್ತಾ ಇದ್ದು, ಸರ್ಕಾರ ಮಿತಿ ಏರಿಸುವುದು ಅನುಮಾನ ಎನ್ನಲಾಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...