alex Certify
ಕನ್ನಡ ದುನಿಯಾ       Mobile App
       

Kannada Duniya

ಸದ್ಯಕ್ಕೆ ಏರಿಕೆಯಾಗಲ್ಲ ಹಣ ಪಡೆಯುವ ಮಿತಿ

epa05625231 A bank executive counts new 2000 Indian rupee notes at a bank in Srinagar, the summer capital of Indian Kashmir, 10 November 2016. In a major decision, Indian Prime Minister, in an address to the nation has stated that currency notes with denomination values of INR 500 (about 7.5 US dollars) and INR 1000 (about 15 US dollars) respectively will be invalid and will be discontinued from midnight of 08 November 2016. Indian government also introduced the new notes of INR 500 (about 7.5 US dollars) and INR 2000 (about 30 US dollars) and citizens would be allowed to exchange their old currency notes through the banks and post offices till 30 December 2016. This is being considered as a major step towards curbing the problem of black money.  EPA/FAROOQ KHANಕಪ್ಪು ಹಣಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದೆ. ಇದಕ್ಕೆ ಬದಲಿಯಾಗಿ ಹೊಸ 500 ಹಾಗೂ 2000 ರೂ. ಮುಖಬೆಲೆಯ ನೋಟುಗಳ ಚಲಾವಣೆಗೆ ಬಂದಿದ್ದು, ಎಟಿಎಂ ಹಾಗೂ ಬ್ಯಾಂಕ್ ಗಳಲ್ಲಿ ಲಭ್ಯವಾಗುತ್ತಿದೆ.

500 ಹಾಗೂ 1000 ರೂ. ಮುಖಬೆಲೆಯ ನೋಟುಗಳು ನಿಷೇಧಗೊಂಡ ನಂತರ ಸಾರ್ವಜನಿಕರು ಬ್ಯಾಂಕ್ ಹಾಗೂ ಎಟಿಎಂಗಳಿಂದ ಹಣ ಪಡೆಯಲು ಮಿತಿಯನ್ನು ನಿಗದಿಪಡಿಸಲಾಗಿತ್ತು. ವಾರಕ್ಕೆ 24 ಸಾವಿರ ರೂ. ಗಳನ್ನು ಪಡೆಯುವ ಅವಕಾಶವಿದ್ದು, ಆರಂಭದಲ್ಲಿ ಎಟಿಎಂಗಳಿಂದ ಹಣ ಪಡೆಯಲು ನಿಗದಿಪಡಿಸಿದ್ದ 2000 ರೂ. ಮಿತಿಯನ್ನು ಮೂರು ಬಾರಿ ಏರಿಕೆ ಮಾಡಿದ್ದು, ಈಗ ಒಮ್ಮೆಲೆ 10 ಸಾವಿರ ರೂ. ಗಳನ್ನು ಡ್ರಾ ಮಾಡಬಹುದಾಗಿದೆ.

ಬ್ಯಾಂಕ್ ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಸಲುವಾಗಿ ಹಾಗೂ ವ್ಯಾಪಾರಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಈ ಕ್ರಮ ಕೈಗೊಂಡಿದ್ದು, ಆದರೆ ಬ್ಯಾಂಕ್ ಗಳಿಂದ ವಾರಕ್ಕೆ 24 ಸಾವಿರ ರೂ. ಡ್ರಾ ಮಾಡುವ ಮಿತಿಯನ್ನು ಇನ್ನೂ ಮೂರು ವಾರಗಳ ಕಾಲ ಏರಿಕೆ ಮಾಡುವುದಿಲ್ಲವೆಂದು ಹೇಳಲಾಗಿದೆ. ಹಣದ ಲಭ್ಯತೆಯನ್ನು ಗಮನಿಸಿದ ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್, ಈ ಹಿಂದಿನಂತೆ ಬ್ಯಾಂಕ್ ಗ್ರಾಹಕರು ತಮ್ಮ ಖಾತೆಗಳಿಂದ ಎಷ್ಟು ಬೇಕಾದರೂ ಹಣ ಪಡೆಯುವ ಅವಕಾಶ ಮಾಡಿಕೊಡಲಿದೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...