alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶವಾಸಿಗಳಿಗೆ ಸ್ವಲ್ಪ ನೆಮ್ಮದಿ ನೀಡಿದ ಕೇಂದ್ರ ಸರ್ಕಾರ

pm-modi_fdeij3v

ನೋಟು ನಿಷೇಧವಾಗಿ 50 ದಿನ ಕಳೆಯುತ್ತಿದ್ದಂತೆ ಕೇಂದ್ರ ಸರ್ಕಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಜಾರಿಗೆ ತಂದಿದೆ. ದೇಶದಲ್ಲಿ ನಗದು ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ. ಕಳೆದ 24 ಗಂಟೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳಾಗಿವೆ.

ಎಟಿಎಂನಲ್ಲಿ ನಗದು ಡ್ರಾ ಮಿತಿಯಲ್ಲಿ ಏರಿಕೆಯಾಗಿದೆ. ಜನವರಿ 1ರಿಂದ ಗ್ರಾಹಕ ಎಟಿಎಂನಲ್ಲಿ 2500ರ ಬದಲಿಗೆ 4500 ರೂಪಾಯಿ ಡ್ರಾ ಮಾಡಿಕೊಳ್ಳಬಹುದಾಗಿದೆ. ಆದ್ರೆ ವಾರದ ವಿತ್ ಡ್ರಾ ಮಿತಿಯಲ್ಲಿ ಏರಿಕೆಯಾಗಿಲ್ಲ. ವಾರವೊಂದಕ್ಕೆ ಕೇವಲ 24 ಸಾವಿರ ರೂಪಾಯಿ ಮಾತ್ರ ಡ್ರಾ ಮಾಡಬಹುದಾಗಿದೆ.

ಕ್ರೆಡಿಟ್ ಮಿತಿಯನ್ನು ಅನಿವಾಸಿ ಭಾರತೀಯರಿಗೆ ವಿಸ್ತರಿಸಲಾಗಿದೆ. ಅನಿವಾಸಿ ಭಾರತೀಯರು ಡಿಸೆಂಬರ್ 30 ರ ಬದಲು ಜೂನ್ 30 ರವರೆಗೆ ಹಳೆ ನೋಟುಗಳನ್ನು ಬ್ಯಾಂಕ್ ಗೆ ಜಮಾ ಮಾಡಬಹುದಾಗಿದೆ. ಇದ್ರ ಜೊತೆಗೆ ನವೆಂಬರ್ 8 ರಿಂದ ಡಿಸೆಂಬರ್ 30ರವರೆಗೆ ವಿದೇಶಿ ಪ್ರವಾಸದಲ್ಲಿದ್ದ ಭಾರತೀಯರಿಗೂ ವಿನಾಯಿತಿ ಸಿಕ್ಕಿದೆ. ಮಾರ್ಚ್ 31 ರವರೆಗೆ ಅವರು 25 ಸಾವಿರ ರೂಪಾಯಿಯವರೆಗೆ ಹಳೆ ನೋಟುಗಳನ್ನು ಜಮಾ ಮಾಡಬಹುದಾಗಿದೆ.

ಶುಕ್ರವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಕೀಕೃತ ಪಾವತಿ ಇಂಟರ್ಫೇಸ್ (UPI)ಗಾಗಿ ಒಂದು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. ಈ ಅಪ್ಲಿಕೇಶನ್ ಎಲ್ಲ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಲ್ಲಿ ಸಾಮಾನ್ಯವಾಗಲಿದೆ. ಭೀಮಾ ಅಪ್ಲಿಕೇಶನ್ ಮೂಲಕ ಸಾಮಾನ್ಯ ಜನರು ಆರಾಮವಾಗಿ ವ್ಯವಹಾರ ನಡೆಸಬಹುದಾಗಿದೆ. ಎಲ್ಲ ಫೋನ್ ನಲ್ಲಿ ಇದು ಲಭ್ಯವಾಗಲಿದ್ದು,ಇದಕ್ಕೆ ಇಂಟರ್ನೆಟ್ ಅವಶ್ಯಕತೆ ಇಲ್ಲ.

ಆರ್ ಬಿ ಐ ಮೊಬೈಲ್ ವಾಲೆಟ್ ಮಿತಿಯನ್ನು ಹೆಚ್ಚಳ ಮಾಡಿದೆ. ಈ ಹಿಂದೆ ಮೊಬೈಲ್ ವಾಲೆಟ್ ಮಿತಿ 20 ಸಾವಿರವಿತ್ತು. ಆದ್ರೀಗ ಅದನ್ನು ಹೆಚ್ಚಳ ಮಾಡಲಾಗಿದೆ. ಅಲ್ಲದೆ ವ್ಯಾಪಾರಿಗಳು ತಮ್ಮ ಖಾತೆಯಲ್ಲಿ 50 ಸಾವಿರದವರೆಗೆ ಹಣ ಸಂಗ್ರಹ ಮಾಡಬಹುದೆಂದು ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...