alex Certify
ಕನ್ನಡ ದುನಿಯಾ       Mobile App
       

Kannada Duniya

ಕುಬೇರರ ಕ್ಲಬ್: ಅಂಬಾನಿ ಫಸ್ಟ್- 11 ಮಂದಿ ಔಟ್

mukes

ನವದೆಹಲಿ: ಕೇಂದ್ರ ಸರ್ಕಾರ ಕಳೆದ ವರ್ಷ ನವೆಂಬರ್ ನಲ್ಲಿ ನೋಟ್ ಬ್ಯಾನ್ ಮಾಡಿದ ಪರಿಣಾಮ, ಬಿಲಿಯನೇರ್ಸ್ ಕ್ಲಬ್ ನಲ್ಲಿ ಬದಲಾವಣೆಗಳಾಗಿವೆ.

ಭಾರತದ ಶ್ರೀಮಂತ ಉದ್ಯಮಿ 2600 ಕೋಟಿ ಡಾಲರ್ ಮೌಲ್ಯದ ಸಂಪತ್ತಿನ ಒಡೆಯ ಮುಖೇಶ್ ಅಂಬಾನಿ ನೋಟ್ ಬ್ಯಾನ್ ಬಳಿಕವೂ ನಂಬರ್ 1 ಸ್ಥಾನದಲ್ಲಿದ್ದಾರೆ.

ಆದರೆ, ಬರೋಬ್ಬರಿ 11 ಮಂದಿ ಈ ಪಟ್ಟಿಯಿಂದ ಹೊರ ಬಿದ್ದಿದ್ದಾರೆ. ಹ್ಯೂರನ್ ಗ್ಲೋಬಲ್ ರಿಚ್ ಲಿಸ್ಟ್ ಇಂಡಿಯಾದ ಅಧ್ಯಯನದ ವರದಿಯಲ್ಲಿ ಈ ಮಾಹಿತಿ ತಿಳಿಸಲಾಗಿದ್ದು, ಭಾರತದ 132 ಶತ ಕೋಟ್ಯಧಿಪತಿಗಳ ಒಟ್ಟು ಸಂಪತ್ತಿನ ಮೌಲ್ಯ 100 ಕೋಟಿ ರೂ.ನಷ್ಟು ಅಥವಾ ಅದಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದೆ.

ಅದೇ ರೀತಿ 14 ಶತ ಕೋಟಿ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ಹಿಂದೂಜಾ ಫ್ಯಾಮಿಲಿ 2 ನೇ ಸ್ಥಾನದಲ್ಲಿದೆ. 14 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿರುವ ದಿಲೀಪ್ ಸಾಂಘ್ವಿ 3 ನೇ ಸ್ಥಾನದಲ್ಲಿದ್ದಾರೆ.

ಉಳಿದಂತೆ ಪಲ್ಲೋನ್ ಜಿ ಮಿಸ್ತ್ರಿ 4 ನೇ ಸ್ಥಾನದಲ್ಲಿದ್ದು, 12 ಬಿಲಿಯನ್ ಡಾಲರ್ ಮೌಲ್ಯದ ಸಂಪತ್ತು ಹೊಂದಿದ್ದಾರೆ. ಲಕ್ಷ್ಮಿ ಮಿತ್ತಲ್ 5 ನೇ ಸ್ಥಾನದಲ್ಲಿ(12 ಬಿಲಿಯನ್ ಡಾಲರ್), ಶಿವ ನಾಡಾರ್ 6 ನೇ ಸ್ಥಾನ(12 ಬಿಲಿಯನ್ ಡಾಲರ್), ಸೈರಸ್ ಪೂನಾವಾಲಾ 7 ನೇ ಸ್ಥಾನ( 11 ಬಿಲಿಯನ್ ಡಾಲರ್), ಅಜೀಂ ಪ್ರೇಮ್ ಜೀ 8 ನೇ ಸ್ಥಾನ(9.7 ಬಿಲಿಯನ್ ಡಾಲರ್), ಉದಯ್ ಕೋಟಕ್ 9 ನೇ ಸ್ಥಾನ(7.2 ಬಿಲಿಯನ್ ಡಾಲರ್), ಡೇವಿಡ್ ರುಬೇನ್ ಮತ್ತು ಸಿಮನ್ ರುಬೇನ್ 10 ನೇ ಸ್ಥಾನ(6.7 ಬಿಲಿಯನ್ ಡಾಲರ್ ಸಂಪತ್ತು)ದಲ್ಲಿದ್ದಾರೆ.

ದೇಶದ ವಾಣಿಜ್ಯ ರಾಜಧಾನಿ ಮುಂಬೈನಲ್ಲಿ 42, ದೆಹಲಿಯಲ್ಲಿ 21, ಅಹಮದಾಬಾದ್ ನಲ್ಲಿ 9 ಬಿಲಿಯನೇರ್ಸ್(ಶತಕೋಟ್ಯಧಿಪತಿ) ಗಳಿದ್ದಾರೆ. ಮಹಾರಾಷ್ಟ್ರದಲ್ಲಿ 51, ದೆಹಲಿ 22, ಗುಜರಾತ್ 10, ಕರ್ನಾಟಕದಲ್ಲಿ 9 ಮಂದಿ ಬಿಲಿಯನೇರ್ಸ್ ಗಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...