alex Certify
ಕನ್ನಡ ದುನಿಯಾ       Mobile App
       

Kannada Duniya

ಗುಜರಿ ಸೇರಲಿವೆ 15 ವರ್ಷಕ್ಕಿಂತ ಹಳೆಯ ವಾಹನಗಳು

ರಸ್ತೆಯಲ್ಲಿ ಈಗಲೂ ಸಂಚರಿಸುತ್ತಿರುವ 15 ವರ್ಷಕ್ಕೂ ಹಳೆಯದಾದ ವಾಹನಗಳು ಇನ್ನು ಮುಂದೆ ಗುಜರಿ ಸೇರಲಿವೆ. ಇಂತಹದ್ದೊಂದು ನಿಯಮ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶೀಘ್ರವೇ ಜಾರಿಗೆ ಬರಲಿದೆ.

2014 ರಲ್ಲಿ ಹಸಿರು ನ್ಯಾಯಾಧಿಕರಣ ಹೊರಡಿಸಿದ್ದ ಆದೇಶವನ್ನು ಪಾಲಿಸಲು ಸರ್ಕಾರ ಮುಂದಾಗಿದ್ದು, 15 ವರ್ಷಕ್ಕೂ ಹಳೆಯದಾದ 4 ಚಕ್ರ ಹಾಗೂ ದ್ವಿಚಕ್ರ ವಾಹನಗಳ ಸಂಚಾರವನ್ನು ನಿಷೇಧಿಸಲಾಗುತ್ತದೆ. ಮುಂದಿನ ವರ್ಷದಿಂದ ಈ ಆದೇಶ ಜಾರಿಗೆ ಬರಲಿದ್ದು, ಇಷ್ಟು ಹಳೆಯ ವಾಹನವನ್ನು ಹೊಂದಿರುವವರು ಅದು ಸುಸ್ಥಿತಿಯಲ್ಲಿದ್ದರೂ ಗುಜರಿಗೆ ಹಾಕದೆ ಅನ್ಯ ಮಾರ್ಗವಿಲ್ಲದಂತಾಗಿದೆ.

ರಸ್ತೆಯಲ್ಲಿ ಸಂಚರಿಸುವುದಿರಲೀ ಸಾರ್ವಜನಿಕ ಸ್ಥಳದಲ್ಲಿ ಪಾರ್ಕಿಂಗ್ ಮಾಡಲೂ ನಿಷೇಧವಿದ್ದು, ಇಷ್ಟರಲ್ಲೇ ಈ ಕುರಿತು ಅಧಿಕೃತ ಆದೇಶ ಹೊರಬೀಳಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...