alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಟ್ಟು ನಿಂತ ಮೆಟ್ರೋಗೆ ಹಿಡಿಶಾಪ ಹಾಕಿದ ಪ್ರಯಾಣಿಕರು

ರಕ್ಷಾ ಬಂಧನ ಹಬ್ಬದಂದು ಹೆಚ್ಚುವರಿ 600 ಟ್ರಿಪ್ ಗಳನ್ನು ಪ್ಲಾನ್ ಮಾಡಿದ್ದ ದೆಹಲಿ ಮೆಟ್ರೋ ತನ್ನ ಯೋಜನೆಯನ್ನು ನಿಭಾಯಿಸುವಲ್ಲಿ ವಿಫಲವಾಗಿದೆ. ಅಂದುಕೊಂಡಿದ್ದೇ ಒಂದು ಆಗಿದ್ದೇ ಇನ್ನೊಂದು ಎಂಬಂತಾಗಿಬಿಟ್ಟಿದೆ ದೆಹಲಿ ಮೆಟ್ರೋ ರೈಲಿನ ಪರಿಸ್ಥಿತಿ. ಅದೇ ಕಾರಣಕ್ಕೆ ಮೆಟ್ರೋ ಪ್ರಯಾಣಿಕರು ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲಕ ಡಿಎಮ್ಆರ್ಸಿಗೆ ಹಿಡಿಶಾಪ ಹಾಕ್ತಿದ್ದಾರೆ.

ನಡೆದದ್ದು ಇಷ್ಟೆ. ರಕ್ಷಾ ಬಂಧನದ ಹಿನ್ನಲೆಯಲ್ಲಿ 600 ಅಧಿಕ ಟ್ರಿಪ್ ಗಳನ್ನ ಡಿಎಮ್ಆರ್ಸಿ ಘೋಷಣೆ ಮಾಡಿತ್ತು. ಆ ಪ್ರಕಾರ ದಿನನಿತ್ಯಕ್ಕಿಂತ ಹೆಚ್ಚಿನ ಜನರು ಮೆಟ್ರೋದಲ್ಲಿ ಪ್ರಯಾಣ ಮಾಡುವ ನಿರೀಕ್ಷೆ ಇತ್ತು. ರಕ್ಷಾ ಬಂಧನದ ದಿನ ಹೆಚ್ಚಿನ ಪ್ರಯಾಣಿಕರು ಮೆಟ್ರೋ ನಂಬಿಕೊಂಡು ಪ್ರಯಾಣಕ್ಕೆ ಮುಂದಾದರು. ಆದ್ರೆ ಭಾನುವಾರ ಬೆಳಗ್ಗೆ 9 ಗಂಟೆ 55 ನಿಮಿಷದಿಂದ ಮಧ್ಯಾಹ್ನ 12 ಗಂಟೆ 40 ನಿಮಿಷದವರೆಗೆ ಮೆಟ್ರೊ ಟ್ರ್ಯಾಕ್ ನ ಹಳದಿ ಕಾರಿಡಾರ್ ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಳ್ತು.

ಸರಿ ಸುಮಾರು ಮೂರು ಗಂಟೆಗಳ ಕಾಲ ಮೆಟ್ರೋ ರೈಲಿನ ಸಂಚಾರವೇ ಇರಲಿಲ್ಲ. ಗುರ್ಗಾಂವ್ ನ ಹೂಡಾ ಸಿಟಿ ಸೆಂಟರ್ನಿಂದ ದೆಹಲಿಯ ಚತ್ತಾಪುರ ರೈಲ್ವೇ ಸ್ಟೇಷನ್ ವರೆಗೂ ಮೆಟ್ರೋ ಸೇವೆ ಸ್ಥಗಿತ ಉಂಟಾಯ್ತು. ಇದರಿಂದ ರೋಸಿ ಹೋದ ಜನರು ಮೆಟ್ರೋ ಟ್ರ್ಯಾಕ್ ಗಳ ಮೇಲೆಯೇ ನಡೆದು ಮುಂದಿನ ನಿಲ್ದಾಣ ತಲುಪಿ ಆನಂತರ ತಲುಪಬೇಕಾದ ಸ್ಥಳ ತಲುಪಿದ್ರು.

ಇದ್ರಲ್ಲಿ ಅನೇಕರು ದೆಹಲಿ ಮೆಟ್ರೋ ಬಗ್ಗೆ ತಮಗಿದ್ದ ಸಿಟ್ಟನ್ನ ಸಾಮಾಜಿಕ ಜಾಲತಾಣಗಳ ಮೂಲಕ ತೀರಿಸಿಕೊಂಡಿದ್ದಾರೆ. ಕೆಲವರು ದೆಹಲಿ ಮೆಟ್ರೋ ನಿಲ್ದಾಣದ ಹೊರಗಿನ ಉದ್ದುದ್ದು ಕ್ಯೂಗಳ ಫೋಟೋಗಳನ್ನ ಪೋಸ್ಟ್ ಮಾಡಿ ಈ ಪರಿಸ್ಥಿತಿಯನ್ನು ನಿಭಾಯಿಸೋಕೆ ನಿಮ್ಮ ಬಳಿ ಮೊದಲೇ ಪ್ಲಾನ್ ಇತ್ತೇ ಅಂತ ದೆಹಲಿ ಮೆಟ್ರೋ ರೈಲು ಆಡಳಿತ ಮಂಡಳಿಯನ್ನ ಪ್ರಶ್ನೆ ಮಾಡಿದ್ದಾರೆ. ಹಲವರು ರಕ್ಷಾ ಬಂಧನಕ್ಕೆ ದೆಹಲಿ ಮೆಟ್ರೊ ಕೊಟ್ಟ ಗಿಫ್ಟ್ ಇದು ಅಂತ ವ್ಯಂಗ್ಯವಾಡಿದ್ದಾರೆ. ಮತ್ತೆ ಕೆಲವರು ಟ್ರ್ಯಾಕ್ ಮೇಲೆ ಜನರು ನಿರಾಶೆಯಿಂದ ನಡೆದುಕೊಂಡು ಬರುತ್ತಿರುವ ವಿಡಿಯೋಗಳನ್ನ ಪೋಸ್ಟ್ ಮಾಡಿ ದೆಹಲಿ ಮೆಟ್ರೋ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...