alex Certify
ಕನ್ನಡ ದುನಿಯಾ       Mobile App
       

Kannada Duniya

ರೆಡಿಯಾಯ್ತು ದೇಶದ ಮೊದಲ ಹೆಲಿಕಾಪ್ಟರ್ ನಿಲ್ದಾಣ

hliport

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಹೆಲಿಕಾಪ್ಟರ್ ನಿಲ್ದಾಣ ನಿರ್ಮಿಸಿದ್ದು, ಮುಂದಿನ ವಾರದಿಂದ ಕಾರ್ಯಾರಂಭ ಮಾಡಲಿದೆ.

ಸರ್ಕಾರಿ ಸ್ವಾಮ್ಯದ ಹೆಲಿಕಾಪ್ಟರ್ ಸೇವಾ ಸಂಸ್ಥೆ ಪವನ್ ಹನ್ಸ್ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಸುಮಾರು 100 ಕೋಟಿ ರೂ. ವೆಚ್ಛದಲ್ಲಿ ಆಧುನಿಕ ಮಾದರಿಯಲ್ಲಿ ಹೆಲಿಪೋರ್ಟ್ ನಿರ್ಮಿಸಿದೆ.

ಈ ನಿಲ್ದಾಣದಲ್ಲಿ 16 ಹೆಲಿಕಾಪ್ಟರ್ ಗಳು ನಿಲ್ಲಬಹುದಾಗಿದ್ದು, 9 ಪಾರ್ಕಿಂಗ್ ಬೇ ನಿರ್ಮಿಸಲಾಗಿದೆ. ಸುಸಜ್ಜಿತ ಟರ್ಮಿನಲ್ ಕಟ್ಟಡವಿದೆ. ಜೊತೆಗೆ ಹೆಲಿಕಾಪ್ಟರ್ ನಿರ್ವಹಣೆ, ದುರಸ್ತಿಗೆ ವ್ಯವಸ್ಥೆಯನ್ನು ಮಾಡಲಾಗಿದೆ. ಕಾರ್ ಪಾರ್ಕಿಂಗ್ ವ್ಯವಸ್ಥೆಯೂ ಇದೆ.

ಇಲ್ಲಿಂದ ಆಗ್ರಾ, ಶಿಮ್ಲಾ, ಡೆಹ್ರಾಡೂನ್, ಹರಿದ್ವಾರ, ಮಥುರಾ ಮೊದಲಾದ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಜೊತೆಗೆ ಕೈಗಾರಿಕಾ ವಸಾಹತುಗಳಾದ ಮನೇಸರ್, ಬಹದೂರ್ ಘಡಕ್ಕೂ ಸಂಪರ್ಕ ವ್ಯವಸ್ಥೆ ಇರುತ್ತದೆ.

ಇಂದಿರಾಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ದಟ್ಟಣೆಯಿಂದ ಕೂಡಿರುವುದರಿಂದ ರೋಹಿಣಿ ಹೆಲಿಪೋರ್ಟ್ ನಿಂದ ಹೆಲಿಕಾಪ್ಟರ್ ಗಳ ಹಾರಾಟಕ್ಕೆ ಅನುಕೂಲವಾಗಲಿದೆ ಎಂದು ಏವಿಯೇಷನ್ ಸೆಕ್ರೆಟರಿ ಆರ್.ಎನ್. ಚೌಬೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...