alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್ಥಿಕತೆಗೂ ಪೆಟ್ಟು ಕೊಟ್ಟ ದೆಹಲಿ ಮಾಲಿನ್ಯ

deli

ನವದೆಹಲಿ: ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದಿಂದಾಗಿ ಅನೇಕ ಸಮಸ್ಯೆಗಳು ಎದುರಾಗಿವೆ. ಇದು ಆರ್ಥಿಕ ಚಟುವಟಿಕೆ ಮೇಲೆಯೂ ಗಂಭೀರ ಪರಿಣಾಮ ಬೀರಿದೆ.

ಬ್ರ್ಯಾಂಡ್ ಇಂಡಿಯಾ ಮತ್ತು ದೆಹಲಿ ಬ್ರ್ಯಾಂಡ್ ಗಳಿಗೆ ಮಾಲಿನ್ಯದಿಂದ ಹೊಡೆತ ಬಿದ್ದಿದೆ. ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಕಾರ್ಮಿಕರಿಗೆ ಕಷ್ಟವಾಗಿ ಉತ್ಪಾದನೆ ಕುಸಿಯತೊಡಗಿದೆ. ಆಟೋಮೊಬೈಲ್, ಕಟ್ಟಡ ನಿರ್ಮಾಣ, ಮೊದಲಾದ ವಲಯಗಳು, ಪ್ರವಾಸೋದ್ಯಮ ಚಟುವಟಿಕೆ ಮೇಲೆ ವಾಯು ಮಾಲಿನ್ಯ ಪರಿಣಾಮ ಬೀರಿದೆ. ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಉತ್ಪಾದನೆಯೂ ಕಡಿಮೆಯಾಗಿದೆ.

ಕೆಲವು ಕಂಪನಿಗಳು ಮನೆಯಲ್ಲಿಯೇ ಕುಳಿತು ಕೆಲಸ ಮಾಡಲು ನೌಕರರಿಗೆ ಸೂಚನೆ ನೀಡಿದ್ದರೆ, ಮತ್ತೆ ಕೆಲವು ಕಂಪನಿಗಳು ನೌಕರರನ್ನು ತಾತ್ಕಾಲಿಕ ವರ್ಗಾವಣೆ ಮಾಡಿವೆ.

ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರ ಕ್ರಮ ಕೈಗೊಂಡಿದ್ದರೂ, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಮಾಲಿನ್ಯದಿಂದ ದೆಹಲಿ ಆರ್ಥಿಕತೆಗೆ ದೊಡ್ಡ ಪೆಟ್ಟು ಬಿದ್ದಿದೆ. ಮಾಲಿನ್ಯ ಹೊಗೆಯಿಂದ ಮುಕ್ತರಾಗಲು ಜನ ಏರ್ ಫಿಲ್ಟರ್ ಮಾಸ್ಕ್ ಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ. ಇಂತಹ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...