alex Certify
ಕನ್ನಡ ದುನಿಯಾ       Mobile App
       

Kannada Duniya

ಪತಂಜಲಿ ಆಮ್ಲಾ ಜ್ಯೂಸ್ ಮಾರಾಟ ರದ್ದು

patanjali_o8sevf1

ಕ್ಯಾಂಟೀನ್ ಸ್ಟೋರ್ಸ್ ಇಲಾಖೆ, ಯೋಗ ಗುರು ಬಾಬಾ ರಾಮದೇವ್ ಪತಂಜಲಿ ಆಯುರ್ವೇದದ ಪತಂಜಲಿ ಆಮ್ಲ ರಸದ ಮಾರಾಟವನ್ನು ರದ್ದು ಮಾಡಿದೆ. ಸರ್ಕಾರಿ ಪ್ರಯೋಗಾಲಯದಲ್ಲಿ ನಡೆದ ಪರೀಕ್ಷೆಯಲ್ಲಿ ಆಮ್ಲ ಜ್ಯೂಸ್ ಫೇಲ್ ಆದ ಕಾರಣ ಸಿಎಸ್ಡಿ ಈ ನಿರ್ಧಾರ ಕೈಗೊಂಡಿದೆ.

ಏಪ್ರಿಲ್ 3,2017ರಂದು ಬರೆದ ಪತ್ರವೊಂದರಲ್ಲಿ ಈಗಿರುವ ಎಲ್ಲ ಆಮ್ಲ ಜ್ಯೂಸ್ ಸ್ಟಾಕನ್ನು ಲೀಸ್ಟ್ ಮಾಡಿ ವಾಪಸ್ ಮಾಡುವಂತೆ ಎಲ್ಲ ಸ್ಟೋರ್ ಗಳಿಗೆ ಹೇಳಲಾಗಿದೆ. ಆರಂಭದಲ್ಲಿ ಮಾರುಕಟ್ಟೆಗೆ ಬಿಟ್ಟ ಪತಂಜಲಿ ಉತ್ಪನ್ನಗಳಲ್ಲಿ ಇದೂ ಒಂದು. ಮಾರುಕಟ್ಟೆಯಲ್ಲಿ ಆಮ್ಲ ಜ್ಯೂಸ್ ಗ್ರಾಹಕರ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಆರೋಗ್ಯಕರ ಉತ್ಪನ್ನಗಳೊಂದಿಗೆ ಮಾರುಕಟ್ಟೆಗೆ ಧುಮುಕಿದ್ದ ಪತಂಜಲಿ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಪೈಪೋಟಿ ನಡೆಸುತ್ತಿದೆ.

ಕೋಲ್ಕತ್ತಾದ ಪ್ರಯೋಗಾಲಯವೊಂದು ಆಮ್ಲ ಜ್ಯೂಸನ್ನು ಪ್ರಯೋಗಕ್ಕೊಳಪಡಿಸಿತ್ತು. ಇದು ಬಳಕೆಗೆ ಯೋಗ್ಯವಲ್ಲ ಎನ್ನುವ ವಿಷಯ ಹೊರ ಬಂದಿದೆ. ಸೇನಾ ಕ್ಯಾಂಪ್ ನಲ್ಲಿದ್ದ ಆಮ್ಲಾ ಜ್ಯೂಸ್ ಗಳನ್ನು ಪತಂಜಲಿ ಕಂಪನಿಗೆ ವಾಪಸ್ ಕಳುಹಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...