alex Certify
ಕನ್ನಡ ದುನಿಯಾ       Mobile App
       

Kannada Duniya

ದೀಪಾವಳಿ ಆಫರ್: ಖರೀದಿದಾರರಿಗೆ ಸುಗ್ಗಿ

ಸಾಮಾನ್ಯವಾಗಿ ಹಬ್ಬದ ವೇಳೆ ಮನೆಗೆ ಹೊಸ ವಸ್ತುಗಳು, ವಾಹನ ತರಬೇಕೆಂಬ ಬಯಕೆ ಜನ ಸಾಮಾನ್ಯರಲ್ಲಿರುತ್ತದೆ. ಹಾಗಾಗಿ, ಹಬ್ಬದ ಸೀಸನ್ ನಲ್ಲಿ ಕಂಪನಿಗಳು ಉತ್ಪನ್ನಗಳಿಗೆ ರಿಯಾಯಿತಿ ನೀಡುತ್ತವೆ.

ಹಬ್ಬದ ಸೀಸನ್ ನಲ್ಲಿ ಗ್ರಾಹಕರಲ್ಲಿ ಕೊಳ್ಳುಬಾಕ ಸಂಸ್ಕೃತಿ ಹೆಚ್ಚಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಮಾರಾಟಗಾರರು ವಿಶೇಷ ಆಫರ್ ಗಳನ್ನು ನೀಡಿ ಹೆಚ್ಚಿನ ವಹಿವಾಟು ನಡೆಸುತ್ತಾರೆ. ವರ್ಷವಿಡೀ ನಡೆಸುವ ವ್ಯಾಪಾರ, ವಹಿವಾಟಿಗಿಂತ ಹಬ್ಬದ ಸೀಸನ್ ಗಳಲ್ಲಿ ನಡೆಯುವ ವಹಿವಾಟು ಜೋರಾಗಿರುತ್ತದೆ.

ದೀಪಾವಳಿ ಪ್ರಯುಕ್ತ ಅನೇಕ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ರಿಯಾಯಿತಿ ನೀಡಿವೆ. ಇ ಕಾಮರ್ಸ್ ತಾಣಗಳಲ್ಲಂತೂ ಖರೀದಿ ಭರಾಟೆ ಭಾರೀ ಜೋರಾಗಿದೆ.

ಕೆಲವು ಮೊಬೈಲ್ ಖರೀದಿಸುವ ಗ್ರಾಹಕರಿಗೆ ಉಡುಗೊರೆಗಳ ಜೊತೆಗೆ ಕ್ಯಾಶ್ ಬ್ಯಾಕ್ ಆಫರ್, ಫ್ರೀ ಡೇಟಾ ನೀಡಲಾಗ್ತಿದೆ.

ಸ್ನ್ಯಾಪ್ ಡೀಲ್ ದೀಪಾವಳಿ ಸೇಲ್ ಅಕ್ಟೋಬರ್ 7 ರಿಂದ 9 ರ ವರೆಗೆ ಇದ್ದು, ವಿವಿಧ ಉತ್ಪನ್ನಗಳನ್ನು ಅರ್ಧಕ್ಕರ್ಧ ಕಡಿಮೆ ಬೆಲೆಯಲ್ಲಿ ಮಾರಾಟಕ್ಕಿಟ್ಟಿದೆ. ಕೆಲವು ವಸ್ತುಗಳಿಗೆ ಶೇ. 40 ರಿಂದ ಶೇ. 80 ರವರೆಗೂ ರಿಯಾಯಿತಿ ನೀಡಲಾಗಿದೆ.

ಅಮೆಜಾನ್ ನಲ್ಲೂ ಮಾರಾಟ ಜೋರಾಗಿದೆ. ಬಟ್ಟೆ, ಶೂಸ್, ವಾಚ್, ಜ್ಯುವೆಲ್ಲರಿ ಮೇಲೆ ಹೆಚ್ಚಿನ ಡಿಸ್ಕೌಂಟ್ ನೀಡಲಾಗಿದೆ. ಮೋರ್ ಬ್ಲಾಕ್ ಬಸ್ಟರ್ ಆಫರ್ಸ್ ನಲ್ಲಿ ಅರ್ಧಕ್ಕರ್ಧ ಕಡಿಮೆ ಬೆಲೆಯಲ್ಲಿ ವಸ್ತುಗಳನ್ನು ಮಾರಾಟಕ್ಕಿಡಲಾಗಿದೆ.

ಇನ್ನು ಕೆಲವು ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಭರ್ಜರಿ ಆಫರ್ ನೀಡಿವೆ. ವಾಹನ ಶೋರೂಂ, ಗೃಹೋಪಯೋಗಿ ವಸ್ತುಗಳ ಮಾರಾಟ ತಾಣಗಳಲ್ಲಿಯೂ ಗ್ರಾಹಕರನ್ನು ಸೆಳೆಯಲು ರಿಯಾಯಿತಿ ನೀಡಲಾಗಿದೆ.

ಮೊಬೈಲ್, ಸನ್ ಗ್ಲಾಸ್, ಬಟ್ಟೆ, ಆಟಿಕೆ, ಟಿ.ವಿ., ಕಾರ್, ಪಾದರಕ್ಷೆ, ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವಾರು ಉತ್ಪನ್ನಗಳ ಮೇಲೆ ರಿಯಾಯಿತಿ ನೀಡಲಾಗಿದ್ದು, ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...